![](https://kannadadunia.com/wp-content/uploads/2024/04/bjp-bjp.png)
ಬೆಂಗಳೂರು: ಕಾಂಗ್ರೆಸ್ ಬಂದಿದೆ – ಕೆಪಿಎಸ್ಸಿಯಲ್ಲಿ ಅಕ್ರಮಗಳು ಹೆಚ್ಚುತ್ತಿದೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
ಕೆಪಿಎಸ್ ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೂ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೂ ಬಿಡಿಸಲಾಗದ ನಂಟು. ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಯನ್ನು ಎರೆಡೆರೆಡು ಬಾರಿ ತಪ್ಪಾಗಿ ನಡೆಸಿದ್ದು ಮಾತ್ರವಲ್ಲದೆ, ಈಗ ಮುಖ್ಯ ಪರೀಕ್ಷೆಗೆ ಬಿಡುಗಡೆಗೊಳಿಸಿರುವ ಆಯ್ಕೆಪಟ್ಟಿಯಲ್ಲಿಯೂ ಹಲವಾರು ಅಕ್ರಮಗಳು ನಡೆದಿವೆ ಎಂದು ಕಿಡಿಕಾರಿದೆ.
ಇನ್ನೂ ಸಿಟಿಐ ಹುದ್ದೆಗೆ ಸಂಬಂಧಿಸಿದ ಆಯ್ಕೆ ಪಟ್ಟಿಯಲ್ಲಿಯೂ ಸಹ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿರುವವರು ಆಯ್ಕೆಯಾಗಿರುವುದು ಸಹ ಬೃಹತ್ ಅಕ್ರಮ ನಡೆದಿರುವ ಸ್ಪಷ್ಟ ಸೂಚಕ. ಇದಲ್ಲದೆ ಮಧ್ಯರಾತ್ರಿಯಲ್ಲಿ ಆಯ್ಕೆ ಪಟ್ಟಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ರಾತ್ರಿ ಅವಧಿಯಲ್ಲಿ ಕೆಪಿಎಸ್ಸಿ ಕಾರ್ಯ ನಿರ್ವಹಿಸುತ್ತಿರುವುದು ಯಾವ ಪುರುಷಾರ್ಥ ಸಾಧನೆಗಾಗಿ..? ಎಂದು ಪ್ರಶ್ನಿಸಿದೆ.
ಸಿಎಂ ಸಿದ್ದರಾಮಯ್ಯ ಅವರೆ, ಕೆಎಎಸ್ ಮುಖ್ಯ ಪರೀಕ್ಷೆ ಆಯ್ಕೆ ಪಟ್ಟಿ ಹಾಗೂ ಸಿಟಿಐ ಹುದ್ದೆ ಆಯ್ಕೆ ಪಟ್ಟಿಯನ್ನು ತತಕ್ಷಣ ತಡೆಹಿಡಿದು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದೆ.