alex Certify ಒಂದು ಕಾಲದಲ್ಲಿ ಮಗಳ ಮದುವೆಗೆ 550 ಕೋಟಿ ರೂ. ಖರ್ಚು ಮಾಡಿದ್ದ ಉದ್ಯಮಿ ಈಗ ʼದಿವಾಳಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಕಾಲದಲ್ಲಿ ಮಗಳ ಮದುವೆಗೆ 550 ಕೋಟಿ ರೂ. ಖರ್ಚು ಮಾಡಿದ್ದ ಉದ್ಯಮಿ ಈಗ ʼದಿವಾಳಿʼ

ಒಂದು ಕಾಲದಲ್ಲಿ ಬಿಲಿಯನೇರ್ ಆಗಿ ಮೆರೆದ, ತಮ್ಮ ಮಗಳ ಮದುವೆಗೆ 550 ಕೋಟಿ ರೂ. ಖರ್ಚು ಮಾಡಿ ಸುದ್ದಿಯಾಗಿದ್ದ ಪ್ರಮೋದ್ ಮಿತ್ತಲ್ ಈಗ ದಿವಾಳಿಯಾಗಿದ್ದಾರೆ. ಲಂಡನ್‌ನ ಸಾಲ ವಸೂಲಿ ನ್ಯಾಯಾಲಯವು ಅವರನ್ನು ದಿವಾಳಿ ಎಂದು ಘೋಷಿಸಿದೆ.

ಅವರ ಈ ಸ್ಥಿತಿಗೆ ಕಾರಣ ಅವರ ಕೆಲವು ತಪ್ಪು ನಿರ್ಧಾರಗಳು. 2013 ರಲ್ಲಿ, ಅವರು ಬೋಸ್ನಿಯನ್ ಮೆಟಾಲರ್ಜಿಕಲ್ ಕಂಪೆನಿಯಾದ ಜಿಐಕೆಐಎಲ್‌ಗೆ 166 ಮಿಲಿಯನ್ ಡಾಲರ್ ಸಾಲಕ್ಕೆ ಭದ್ರತೆ ನೀಡಿದ್ದರು. ಈ ಕಂಪೆನಿಯಲ್ಲಿ ಅವರು ಸಹ-ಮಾಲೀಕರು ಮತ್ತು ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷರಾಗಿದ್ದರು. ಜಿಐಕೆಐಎಲ್ ಸಾಲವನ್ನು ಮರುಪಾವತಿಸಲು ವಿಫಲವಾದಾಗ, ಮಿತ್ತಲ್ ಆ ಸಾಲದ ಹೊಣೆಗಾರರಾದರು.

ಅವರ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತು. ಲಂಡನ್‌ನ ಇನ್‌ಸಾಲ್ವೆನ್ಸಿ ಮತ್ತು ಕಂಪೆನೀಸ್ ಕೋರ್ಟ್ ಅವರನ್ನು ದಿವಾಳಿ ಎಂದು ಘೋಷಿಸಿತು. ಅವರು 2.5 ಬಿಲಿಯನ್ ಪೌಂಡ್‌ಗಳಷ್ಟು (ಆ ಸಮಯದಲ್ಲಿ 24,000 ಕೋಟಿ ರೂ.ಗಳಿಗಿಂತ ಹೆಚ್ಚು) ಸಾಲ ಹೊಂದಿದ್ದರು ಎಂದು ವರದಿಯಾಗಿದೆ. ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ಅವರು ದೆಹಲಿಯಲ್ಲಿ ಮಾತ್ರ ಆಸ್ತಿ ಹೊಂದಿದ್ದಾರೆ ಮತ್ತು ಯಾವುದೇ ವೈಯಕ್ತಿಕ ಆದಾಯವಿಲ್ಲ, ತಮ್ಮ ಪತ್ನಿ ಸಂಗೀತ ಮತ್ತು ಮಕ್ಕಳನ್ನು ಮಾತ್ರ ಅವಲಂಬಿಸಿದ್ದಾರೆ ಎಂದು ಒಪ್ಪಿಕೊಂಡರು.

ಮಿತ್ತಲ್ ಸಾಲಗಾರರಿಗೆ ಹಣ ಪಾವತಿಸಲು ತಮ್ಮ ಕುಟುಂಬ ಸದಸ್ಯರಿಂದ ದೊಡ್ಡ ಮೊತ್ತವನ್ನು ಸಾಲವಾಗಿ ಪಡೆದಿದ್ದರು. ಅವರ ಪತ್ನಿಯಿಂದ 1.1 ಮಿಲಿಯನ್ ಪೌಂಡ್‌ಗಳು, ಅವರ ಮಗ ದಿವ್ಯೇಶ್‌ನಿಂದ 2.4 ಮಿಲಿಯನ್ ಪೌಂಡ್‌ಗಳು ಮತ್ತು ಅವರ ಭಾವನಿಂದ 1.1 ಮಿಲಿಯನ್ ಪೌಂಡ್‌ಗಳನ್ನು ಪಡೆದಿದ್ದರು. 2019 ರಲ್ಲಿ ಬೋಸ್ನಿಯಾದಲ್ಲಿ ಜಿಐಕೆಐಎಲ್‌ನ ಇಬ್ಬರು ಅಧಿಕಾರಿಗಳೊಂದಿಗೆ ವಂಚನೆ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು.

ಇವರ ಈ ದಿಢೀರ್ ಕುಸಿತವು ಅವರ ಹಿಂದಿನ ಐಷಾರಾಮಿ ಜೀವನಶೈಲಿಗೆ ವ್ಯತಿರಿಕ್ತವಾಗಿದೆ. ಅವರ ಸಹೋದರ ಲಕ್ಷ್ಮೀ ಮಿತ್ತಲ್ ಸಹ ತಮ್ಮ ಮಗಳ ಮದುವೆಗೆ 240 ಕೋಟಿ ರೂ. ಖರ್ಚು ಮಾಡುವ ಮೂಲಕ ಸುದ್ದಿಯಾಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Vansinnig utmaning Загадочная головоломка: только 2% владельцев "супермозгов" могут Vad du ser först: optisk illusion avslöjar din självförtroende