![](https://kannadadunia.com/wp-content/uploads/2025/02/dks-rajanna.jpg)
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಭಾರಿ ಲಾಬಿ ಆರಂಭವಾಗಿರುವ ನಡುವೆಯೇ ಸಚಿವ ಕೆ.ಎನ್.ರಾಜಣ್ಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಮಾತನ ಸಮರ ಶುರುವಾಗಿದೆ.
ಸಹಕಾರ ಸಚಿವ ಕೆ.ಎನ್,ರಾಜಣ್ಣ ಇಂದು ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ರಾಜಣ್ಣ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಅವರು ದೊಡ್ಡ ನಾಯಕರು. ನಾವೆಲ್ಲ ಕಾರ್ಯಕರ್ತರು. ದೊಡ್ಡ ನಾಯಕರ ಬಗ್ಗೆ ನಾನು ಮಾತನಾಡಲ್ಲ ಎಂದು ಟಾಂಗ್ ನೀಡಿದ್ದಾರೆ.
ಸಚಿವ ರಾಜಣ್ಣ ಪಕ್ಷದ ಹಿರಿಯ ನಾಯಕರು. ನಾನೇನು ಅವರ ಬಗ್ಗೆ ಪ್ರತಿಕ್ರಿಯೆ ನೀಡಲಿ ಹೇಳಿ? ಎಂದರು.
ರಾಜಣ್ಣ ದೊಡ್ಡ ನಾಯಕರು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಕೆ.ಎನ್.ರಾಜಣ್ಣ, ದೊಡ್ಡ ನಾಯಕರು ಸಣ್ಣ ನಾಯಕರು ಅನ್ನೋದು ಬೇರೆ. ನಾವು ಕುಬೇರರ ಮಾತಿಗೆ ಪ್ರತಿಕ್ರಿಯೆ ನೀಡಲ್ಲ. ನಾನು ರಣದೀಪ್ ಸಿಂಗ್ ಸುರ್ವ್ಜೇವಾಲಾ ಅವರ ಭೇಟಿಗೆ ಬಂದಿದ್ದೇನೆ ಎಂದು ಹೇಳಿದರು.