![](https://kannadadunia.com/wp-content/uploads/2024/02/train-train-railway.png)
ಮೈಸೂರು: ರಾಜ್ಯದಲ್ಲಿ ದರೋಡೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಳ್ಳಕಾಕರು ಎಲ್ಲೆಂದರಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಜನರು ಆತಂಕದಲ್ಲಿಯೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳ್ಳರಿಗೆ, ದರೋಡೆಕೋರರಿಗೆ ಪೊಲೀಸರೆಂದ ಕಿಂಚಿತ್ತೂ ಭಯವಿಲ್ಲ, ಇಲ್ಲೊಂದು ಘಟನೆಯಲ್ಲಿ ದರೋಡೆಕೋರರ ಗುಂಪು ಪೊಲೀಸರನ್ನೇ ಹೆದರಿಸಿ ಎಸ್ಕೇಪ್ ಆಗಿದೆ.
ಮೈಸೂರು-ಬೆಂಗಳೂರು ಮೆಮೋ ರೈಲಿನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿಯೇ ದರೋಡೆಕೋರರು ಪ್ರಯಾಣಿಕರಿಂದ ಹಣ, ಮೊಬೈಲ್ ಕಿತುಕೊಂಡು ಪರಾರಿಯಾಗಿದ್ದಾರೆ. ಆರಂಭದಲ್ಲಿ ಪ್ರಯಾಣಿಕರಂತೆ ರೈಲು ಹತ್ತಿದ್ದ ಐವರ ಗುಂಪು ಮಂಡ್ಯ ಬಳಿ ಬರುತ್ತಿದ್ದಂತೆ ಚಾಕುವಿನಿಂದ ಪ್ರಯಾಣಿಕರನ್ನು ಹೆದರಿಸಿ ಹಣ, ಮೊಬೈಲ್ ಕಿತ್ತುಕೊಂಡಿದ್ದಾರೆ.
ಸುಮಾರು 12 ಸಾವಿರ ರೂಪಾಯಿ ಹಣ, 5 ಮೊಬೈಲ್ ಗಳನು ದೋಚಿದ್ದಾರೆ. ಪ್ರಯಣಿಕರೊಬ್ಬರು ತಕ್ಷಣ ಪೊಲೀಸರಿಗೆ ಸಂದೇಶ ರವಾನಿಸಿದ್ದಾರೆ. ಈ ವೇಳೆ ರೈಲ್ವೆ ಪೊಲೀಸರು ರೈಲಿನೊಳಗೆ ಬಂದಿದ್ದಾರೆ. ಚನ್ನಪಟ್ಟಣ ಬಳಿ ದರೋಡೆಕೋರರನ್ನು ಸೆರೆಹಿಡಿಯಲು ಮುಂದಾಗುತ್ತಿದಂತೆ ದರೋಡೆಕೋರರು ಮಾರಕಾಸ್ತ್ರಗಳಿಂದ ಪೊಲೀಸರನ್ನೇ ಹೆದರಿಸಿ ರೈಲಿನಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.