ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜೆಇಇ ಮೇನ್ 2025 ಸೆಷನ್ 1 ಫಲಿತಾಂಶವನ್ನು ಫೆಬ್ರವರಿ 11, 2025 ರಂದು ಬಿಡುಗಡೆ ಮಾಡಿದ್ದು, ರಾಜ್ಯದ ಕುಶಾಗ್ರಾ ಗುಪ್ತಾ ಎಂಬ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ರಾಷ್ಟ್ರ,ಮಟ್ಟದಲ್ಲಿ ಶೇ 100 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಕುಶಾಗ್ರ 14 ನೇ ಸ್ಥಾನ ಪಡೆದಿದ್ದಾರೆ. ರಾಜ್ಯದ ಇತರ ಟಾಪ್ ಗಳಲ್ಲಿ ಕಗ್ಗದಾಸಪುರದ ಗೀತಾಂಜಲಿ ವಿದ್ಯಾಲಯದ ಉದಿತ್ ಜೈಸ್ವಾಲ್ ಶೇ 99.996 ಅಂಕಗಳನ್ನು ಗಳಿಸಿದ್ದಾರೆ.
jeemain.nta.nic.in. ಜನವರಿ ಸೆಷನ್ ಫಲಿತಾಂಶಗಳನ್ನು ವೀಕ್ಷಿಸಲು, ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಅಥವಾ ಪಾಸ್ವರ್ಡ್ ಅನ್ನು ನಮೂದಿಸಬೇಕಾಗುತ್ತದೆ. ಈ ಸೆಷನ್ ನಲ್ಲಿ ಒಟ್ಟು 14 ಅಭ್ಯರ್ಥಿಗಳು 100 ಪರ್ಸಂಟೈಲ್ ಗಳಿಸಿದ್ದಾರೆ. ಎನ್ಟಿಎ ಸೆಷನ್ 2 ಸ್ಕೋರ್ಕಾರ್ಡ್ಗಳನ್ನು ಬಿಡುಗಡೆ ಮಾಡಿದ ನಂತರ ಅಂತಿಮ ಶ್ರೇಯಾಂಕವನ್ನು ಘೋಷಿಸಲಾಗುತ್ತದೆ.
ಜೆಇಇ ಮೇನ್ 2025 ಬಿಇ / ಬಿಟೆಕ್ ಸೆಷನ್ 1 ಪರೀಕ್ಷೆಗಳು ಜನವರಿ 23, 24, 28, 29 ಮತ್ತು 30 ರಂದು ನಡೆದವು. ಸೆಷನ್ 1 ಪರೀಕ್ಷೆಗೆ ಒಟ್ಟು 1311544 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಅವರಲ್ಲಿ 1258136 ಮಂದಿ ಪರೀಕ್ಷೆ ಬರೆದಿದ್ದಾರೆ.