ಮಹಾರಾಷ್ಟ್ರದ ಮಾಜಿ ಸಚಿವ ತಾನಾಜಿ ಸಾವಂತ್ ಅವರ ಪುತ್ರ ನಾಪತ್ತೆಯಾಗಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ, ಅವರು ಬ್ಯಾಂಕಾಕ್‌ಗೆ ತೆರಳಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಘಟನೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಪೋಲೀಸರು ಅಪಹರಣ ಪ್ರಕರಣ ದಾಖಲಿಸಿದ ಕೆಲವೇ ಗಂಟೆಗಳಲ್ಲಿ, ತಾನಾಜಿ ಸಾವಂತ್ ಅವರ ಪುತ್ರ ರಿಷಿರಾಜ್ ಮತ್ತು ಇಬ್ಬರು ಸ್ನೇಹಿತರನ್ನು ಸೋಮವಾರ ತಡರಾತ್ರಿ ಪುಣೆಗೆ ಕರೆತರಲಾಯಿತು. ಅವರ ಬ್ಯಾಂಕಾಕ್ ಪ್ರವಾಸವು ನಾಟಕೀಯವಾಗಿ ಕೊನೆಗೊಂಡಿತು ಎಂದು ಮೂಲಗಳು ತಿಳಿಸಿವೆ.
ಈ ‘ಅಪಹರಣ’ ನಾಟಕದ ತೆರೆ ಬಿದ್ದರೂ, ಈ ಪ್ರಕರಣದ ವಿವರಗಳು ಪ್ರಸ್ತುತ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ. ತಾನಾಜಿ ಸಾವಂತ್ ಅವರ ಪುತ್ರ ರಿಷಿರಾಜ್ ಸಾವಂತ್ ಸೋಮವಾರ ಸಂಜೆ 4:30 ರ ಸುಮಾರಿಗೆ ಪುಣೆಯ ಲೋಹೇಗಾಂವ್ ವಿಮಾನ ನಿಲ್ದಾಣಕ್ಕೆ ಸ್ವಿಫ್ಟ್ ಕಾರಿನಲ್ಲಿ ತೆರಳಿ ಅಲ್ಲಿಂದ, ರಿಷಿರಾಜ್ ಸಾವಂತ್ ತಮ್ಮ ಸ್ನೇಹಿತರೊಂದಿಗೆ ಚಾರ್ಟರ್ಡ್ ವಿಮಾನದಲ್ಲಿ ಬ್ಯಾಂಕಾಕ್‌ಗೆ ತೆರಳಿದ್ದರು.
ನಿಯಂತ್ರಣ ಕೊಠಡಿಗೆ ಅನಾಮಧೇಯ ಕರೆ ಬಂದ ನಂತರ ಪೋಲಿಸರು ಅಪಹರಣ ಪ್ರಕರಣವನ್ನು ದಾಖಲಿಸಿ, ಅವರ ಸುಳಿವು ಪತ್ತೆ ಹಚ್ಚಿ ವಾಪಾಸ್ ಪುಣೆಗೆ ಮರಳಿ ಕರೆತರಲಾಗಿತ್ತು.
ರಿಷಿರಾಜ್ ಸಾವಂತ್ ಈ ಬ್ಯಾಂಕಾಕ್ ಪ್ರವಾಸಕ್ಕೆ ಬರೋಬ್ಬರಿ 78 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೋಲಿಸ್ ಜಂಟಿ ಆಯುಕ್ತ ರಂಜನ್ ಕುಮಾರ್ ಶರ್ಮಾ ಅವರ ಪ್ರಕಾರ, ರಿಷಿರಾಜ್ ಸಾವಂತ್ (32) ಮತ್ತು ಅವರ ಇಬ್ಬರು ಸ್ನೇಹಿತರು ಬ್ಯಾಂಕಾಕ್‌ಗೆ ಚಾರ್ಟರ್ಡ್ ವಿಮಾನವನ್ನು ಬುಕ್ ಮಾಡಿದ್ದರು, ಆದರೆ ಅನಾಮಧೇಯ ಕರೆ ಅವರ ಪ್ರಯಾಣ ಯೋಜನೆಗಳನ್ನು ಹಾಳು ಮಾಡಿತು.