ಮಹಾ ಕುಂಭ ಮೇಳಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ರೈಲುಗಳಲ್ಲಿ ಭಾರಿ ನೂಕುನುಗ್ಗಲು ಉಂಟಾಗಿದೆ. ಪ್ರಯಾಣಿಕರು ಟಿಕೆಟ್ ಇದ್ದರೂ ರೈಲು ಹತ್ತಲು ಸಾಧ್ಯವಾಗದೆ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಪ್ರಯಾಣಿಕರು ಆಕ್ರೋಶಗೊಂಡು ರೈಲುಗಳ ಗಾಜುಗಳನ್ನು ಒಡೆದು ಹಾನಿ ಮಾಡಿದ್ದಾರೆ.
ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಸ್ವಾತಂತ್ರ್ಯ ಸೇನಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರು ನುಗ್ಗಲು ಯತ್ನಿಸಿದರು. ಈ ವೇಳೆ ಕೆಲವರು ರೈಲಿನ ಗಾಜುಗಳನ್ನು ಒಡೆದರು. ನವಾಡದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ಇಲ್ಲಿ ಗೋಡ್ಡಾ-ನ್ಯೂ ಡೆಲ್ಲಿ ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರು ನೂಕುನುಗ್ಗಲು ನಡೆಸಿದರು.
ಈ ಘಟನೆಗಳಿಂದಾಗಿ ರೈಲುಗಳು ತಡವಾಗಿ ಚಲಿಸಿದವು. ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯುವಂತಾಯಿತು.
जब सरकारें अपने PR के लिए बिना व्यवस्थाओं के 100 करोड़ हिंदुस्तानियों को न्योता देंगी तो ऐसी तस्वीरें आना स्वाभाविक है।
लेकिन रेलवे देश की संपत्ति है, उसको नुकसान नही पहुंचाया जाना चाहिए। pic.twitter.com/maPe4yiwji
— Srinivas BV (@srinivasiyc) February 10, 2025