ಬೆಂಗಳೂರು : ಏರ್ ಶೋ ಹಿನ್ನೆಲೆ ಬೆಂಗಳೂರಲ್ಲಿ ಮತ್ತೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು 4 ಕಿಮೀ ಸಾಲುಗಟ್ಟಿ ನಿಂತಿದೆ.
ಬೆಂಗಳೂರಿನಿಂದ ಏರ್ ಪೋರ್ಟ್ ಗೆ ಹೋಗುವ ಮಾರ್ಗದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು 4 ಕಿಮೀ ಸಾಲುಗಟ್ಟಿ ನಿಂತಿದೆ. ಈ ಹಿನ್ನೆಲೆ ವಾಹನ ಸವಾರರು ಪರದಾಡಿದ್ದಾರೆ. ಏರ್ ಶೋ ಹಿನ್ನೆಲೆ ಯಲಹಂಕ ಫ್ಲೈ ಓವರ್ ನಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರಿನಲ್ಲಿ ನಿನ್ನೆಯಿಂದ ಏರ್ ಶೋ ಆರಂಭವಾಗಿದ್ದು, ಈ ಹಿನ್ನೆಲೆ ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಬೆಳಗ್ಗೆ ಕೆಲಸಕ್ಕೆ ಹೋಗುವ ಜನರು ಪರದಾಡಿದ್ದಾರೆ.