ಮಂಡ್ಯ : ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡನ ಜಿಮ್ ನಲ್ಲೇ ಹೆಂಡತಿ ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ.
ಪತಿ ನಡೆಸುತ್ತಿದ್ದ ಜಿಮ್ ನಲ್ಲೇ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಮೃತಳನ್ನು ದಿವ್ಯಾ 27 ಎಂದು ಗುರುತಿಸಲಾಗಿದೆ.
ಗಂಡ ಬೇರೊಬ್ಬ ಯುವತಿ ಜೊತೆ ಅಕ್ರಮ ಸಂಬಂಧ ಹೊಂದಿರುವ ಶಂಕೆ ಪತ್ನಿಗೆ ಇತ್ತು . ಈ ವಿಚಾರಕ್ಕೆ ಆಗಾಗ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಡೈವೋರ್ಸ್ ನೀಡುವಂತೆ ದಿವ್ಯಾಗೆ ಪತಿ ಗಿರೀಶ್ ಟಾರ್ಚರ್ ನೀಡುತ್ತಿದ್ದನು ಎನ್ನಲಾಗಿದೆ. ಇದರಿಂದ ಮನನೊಂದು ಪತ್ನಿ ದಿವ್ಯಾ ಪತಿಯ ಜಿಮ್ ನಲ್ಲೇ ನೇಣಿಗೆ ಶರಣಾಗಿದ್ದಾರೆ.
ಘಟನೆ ಬಗ್ಗೆ ದಿವ್ಯಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಮ್ ನಲ್ಲಿದ್ದ ಎಲ್ಲಾ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಗಿರೀಶ್ ನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.