ರಾಜ್ಯ ಬಿಜೆಪಿಯ ಭಿನ್ನಮತ ಸ್ಪೋಟಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಬಿಜೆಪಿಯ ರೆಬೆಲ್ ನಾಯಕರುಗಳು ದೆಹಲಿಯತ್ತ ಪ್ರಯಾಣ ಕೈಗೊಂಡಿದ್ದಾರೆ.
ದೆಹಲಿಯಲ್ಲಿ ವಿ. ಸೋಮಣ್ಣ ನಿವಾಸದಲ್ಲಿ ಪೂಜೆ ನಡೆಯುತ್ತಿರುವ ಹಿನ್ನಲೆಯಲ್ಲಿ ಎಲ್ಲ ಬಿಜೆಪಿ ನಾಯಕರು ಅಲ್ಲಿಗೆ ತೆರಳುತ್ತಿದ್ದು, ಯತ್ನಾಳ್ ಟೀಂ ನಿನ್ನೆಯೇ ದೆಹಲಿ ಪ್ರವಾಸ ಕೈಗೊಂಡಿದ್ದರೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಇಂದು ದೆಹಲಿಗೆ ತೆರಳಲಿದ್ದಾರೆ.
ಇದರ ಜೊತೆಯಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಇಂದು ಬೆಳಗ್ಗೆ ದೆಹಲಿಗೆ ತೆರಳಿದ್ದು, ಹಾಗೆಯೇ ಖಾಸಗಿ ಕಾರ್ಯಕ್ರಮದ ಹಿನ್ನಲೆಯಲ್ಲಿ ವಿಜಯೇಂದ್ರ ದೆಹಲಿಯಲ್ಲಿದ್ದಾರೆ. ಶ್ರೀರಾಮುಲು ಸಹಾ ಇಂದು ಪ್ರಯಾಗ್‌ರಾಜ್‌ನಿಂದ ನೇರವಾಗಿ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಇಂದು ರಾಜ್ಯ ಬಿಜೆಪಿಯ ಸಂಪೂರ್ಣ ರಾಜಕೀಯ ದೆಹಲಿ ವಲಯದಲ್ಲಿ ನಡೆಯುತ್ತಿದೆ.