alex Certify BREAKING : ಬೆಂಗಳೂರು ಏರ್ ಶೋಗೆ ರಾಜನಾಥ್ ಸಿಂಗ್ ಅದ್ದೂರಿ ಚಾಲನೆ : ನೀಲಾಕಾಶದಲ್ಲಿ ಘರ್ಜಿಸಿದ ಯುದ್ಧ ವಿಮಾನಗಳು |WATCH VIDEO | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರು ಏರ್ ಶೋಗೆ ರಾಜನಾಥ್ ಸಿಂಗ್ ಅದ್ದೂರಿ ಚಾಲನೆ : ನೀಲಾಕಾಶದಲ್ಲಿ ಘರ್ಜಿಸಿದ ಯುದ್ಧ ವಿಮಾನಗಳು |WATCH VIDEO

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ಏರ್ ಶೋಗೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ , ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ 4 ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ.

ರನ್ವೇ ಟು ಬಿಲಿಯನ್ ಅಪಾರ್ಚುನಿಟಿಸಿ ಘೋಷವಾಕ್ಯದೊಂದಿಗೆ ಏರ್ಶೋ-2025 ಆಯೋಜಿಸಲಾಗಿದೆ. ಇಂದು ಬೆಳಗ್ಗೆ 9.30ಕ್ಕೆ ಏರ್ಶೋಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದು. ನೀಲಾಕಾಶದಲ್ಲಿ ಯುದ್ಧ ವಿಮಾನಗಳು ಘರ್ಜಿಸಲಿವೆ.

 

ಉಕ್ಕಿನ ಹಕ್ಕಿಗಳ ಮ್ಯಾಜಿಕ್ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ.ಏರ್ಶೋದಲ್ಲಿ ರಷ್ಯಾ ಮತ್ತು ಅಮೆರಿಕನ್ ಫೈಟ್ ಏರ್ಕ್ರಾಫ್ಟ್ಗಳು ಭಾಗಿ ಆಗಲಿವೆ. 100 ದೇಶಗಳ 900ಕ್ಕೂ ಹೆಚ್ಚು ರಕ್ಷಣಾ ಸಾಮಗ್ರಿ ಉತ್ಪಾದಕರು ಭಾಗವಹಿಸಲಿದ್ದಾರೆ. ವಿವಿಧ ಕಂಪನಿಗಳ 100 ಸಿಇಒಗಳು, 50 ವಿದೇಶಿ ಒಎಂಎಸ್ ಉಪಸ್ಥಿತರಿರಲಿದ್ದಾರೆ. ಎಐ, ಸೈಬರ್ ಸೆಕ್ಯುರಿಟಿ, ಡ್ರೋನ್ ಮತ್ತು ಗ್ಲೋಬಲ್ ಏರೋಸ್ಪೇಸ್ ಪ್ರದರ್ಶನವಿದೆ. ಆತ್ಮನಿರ್ಭರ ಭಾರತದ ಉತ್ಪನ್ನಗಳು ಇರಲಿದ್ದು 10 ಸೆಮಿನಾರ್ಗಳು ಆಯೋಜಿಸಲಾಗಿದೆ. ರಕ್ಷಣಾ ವಲಯದಲ್ಲಿ ಹೂಡಿಕೆ, ಸಂಶೋಧನೆ, ಜಾಯಿಂಟ್ ವೆಂಚರ್, ರಕ್ಷಣಾ ವಲಯ ಬಗ್ಗೆ ಚರ್ಚೆ ಆಗಲಿದೆ.

 

ಇದರ ಜೊತೆಗೆ ವಾಯು ಪಡೆಯ ವಸ್ತು ಪ್ರದರ್ಶನ ಮಳಿಗೆ, ಯುದ್ಧ ವಿಮಾನಗಳ ವೀಕ್ಷಣೆಗೂ ಅವಕಾಶವಿರಲಿದೆ. ಆದರೆ ಎಲ್ಲಾ ದಿನಗಳಂದು ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿಲ್ಲ. ಕೊನೆಯ ಎರಡು ದಿನಗಳಾದ ಫೆಬ್ರವರಿ 13 ಮತ್ತು 14 ರಂದು ಮಾತ್ರ ಸಾರ್ವಜನಿಕರಿಗೆ ಪ್ರವೇಶವಿದೆ. ಏರ್ ಶೋ ನಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಯಲಹಂಕ ಸುತ್ತಮುತ್ತಲಿನ ಹಲವು ರಸ್ತೆಗಳಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದ್ದು ಆದರೂ ಸಹ ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...