alex Certify ಕುಡಿದ ಅಮಲಿನಲ್ಲಿ ರೈಲ್ವೇ ಹಳಿ ಮೇಲೆ SUV ಚಾಲನೆ ; ಆಘಾತಕಾರಿ ವಿಡಿಯೋ ವೈರಲ್‌ | Watch | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ರೈಲ್ವೇ ಹಳಿ ಮೇಲೆ SUV ಚಾಲನೆ ; ಆಘಾತಕಾರಿ ವಿಡಿಯೋ ವೈರಲ್‌ | Watch

ಉತ್ತರ ಪ್ರದೇಶದ ಅಮ್ರೋಹದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಕಾರನ್ನು ರೈಲ್ವೆ ಹಳಿಯ ಮೇಲೆ ಚಲಾಯಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ರೈಲು ಸಂಚಾರವಿಲ್ಲದ ಕಾರಣ ದೊಡ್ಡ ಅಪಾಯ ತಪ್ಪಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ, ದಂಪತಿ ಕಾರಿನಲ್ಲಿದ್ದು, ಕಾರು ಸುಮಾರು 50 ಮೀಟರ್‌ಗಳಷ್ಟು ದೂರ ಚಲಿಸಿ ಹಳಿಯಲ್ಲಿ ಸಿಲುಕಿಕೊಂಡಿರುವುದು ಕಂಡುಬರುತ್ತದೆ. ಘಟನೆಯಿಂದ ರೈಲ್ವೆ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಯಿತು. ಕಾರು ಹಳಿಯಲ್ಲಿ ಸಿಲುಕಿಕೊಂಡಿದ್ದರಿಂದ ಸುಮಾರು 35 ನಿಮಿಷಗಳ ಕಾಲ ಗೂಡ್ಸ್ ರೈಲನ್ನು ನಿಲ್ಲಿಸಲಾಯಿತು. ತಡರಾತ್ರಿ ಮದುವೆ ಸಮಾರಂಭದಿಂದ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಶುಕ್ರವಾರ (ಫೆಬ್ರವರಿ 7) ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಕಾರು ತೆರೆದಿದ್ದ ಭೀಂಪುರ ರೈಲ್ವೆ ಗೇಟ್ ದಾಟಿ ರೈಲ್ವೆ ಹಳಿಯನ್ನು ಪ್ರವೇಶಿಸಿದೆ. ಮೊರಾದಾಬಾದ್ ಕಡೆಯಿಂದ ಬರುತ್ತಿದ್ದ ಕಾರು ಚಾಲಕ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಚಲಾಯಿಸುವ ಬದಲು ರೈಲ್ವೆ ಹಳಿಯ ಮೇಲೆ ವೇಗವಾಗಿ ಚಲಾಯಿಸಿದ್ದಾನೆ. ವೇಗ ಹೆಚ್ಚಾಗಿದ್ದರಿಂದ ಕಾರು ಸುಮಾರು 50 ಮೀಟರ್‌ಗಳಷ್ಟು ದೂರ ಚಲಿಸಿ ನಂತರ ನಿಂತಿದೆ.

ರೈಲ್ವೆ ಹಳಿಯಲ್ಲಿ ಕಾರು ಚಲಾಯಿಸುವುದನ್ನು ಗಮನಿಸಿದ ರೈಲ್ವೆ ಅಧಿಕಾರಿಗಳು ತಕ್ಷಣ ಕಾರಿನ ಬಳಿ ಧಾವಿಸಿ ನಿಲ್ಲಿಸಿದ್ದು, ಚಾಲಕ ಏನು ನಡೆಯುತ್ತಿದೆ ಎಂದು ತಿಳಿಯದೆ ದಿಗ್ಭ್ರಮೆಗೊಂಡಿದ್ದ. ರೈಲ್ವೆ ನೌಕರರು ಆತ ರೈಲ್ವೆ ಹಳಿಯಲ್ಲಿ ಕಾರು ಚಲಾಯಿಸಿದ್ದಾನೆಂದು ತಿಳಿಸಿ ಬಳಿಕ ತಕ್ಷಣ ಕಾರಿನಿಂದ ಇಳಿದು ಪರಾರಿಯಾದ. ಗೇಟ್‌ಕೀಪರ್ ಕಂಟ್ರೋಲ್ ರೂಮ್‌ಗೆ ಮಾಹಿತಿ ರವಾನಿಸಿದ ನಂತರ ಅದೇ ರೈಲ್ವೆ ಹಳಿಯಲ್ಲಿ ಬರುತ್ತಿದ್ದ ಗೂಡ್ಸ್ ರೈಲನ್ನು ನಿಲ್ಲಿಸಲಾಯಿತು.

ಸುಮಾರು 35 ನಿಮಿಷಗಳ ಕಾಲ ರೈಲು ನಿಲ್ಲಬೇಕಾಯಿತು. ದೆಹಲಿಯಿಂದ ಗೂಡ್ಸ್ ರೈಲು ಬರುತ್ತಿದ್ದು, ಕಾರು ರೈಲ್ವೆ ಹಳಿಯಲ್ಲಿ ಸಿಲುಕಿಕೊಂಡಿರುವ ಬಗ್ಗೆ ನಿಲ್ದಾಣದ ಸೂಪರಿಂಟೆಂಡೆಂಟ್‌ಗೆ ಮಾಹಿತಿ ನೀಡಲಾಯಿತು, ನಂತರ ಅವರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಪುರಸಭೆಯ ಹೈಡ್ರಂಟ್ ಸಹಾಯದಿಂದ ಕಾರನ್ನು ಹಳಿಯಿಂದ ತೆರವುಗೊಳಿಸಿದರು.

ಕಾರನ್ನು ರೈಲ್ವೆ ಹಳಿಯಿಂದ ತೆರವುಗೊಳಿಸಿದ ನಂತರ ಸುಮಾರು 35 ನಿಮಿಷಗಳ ಕಾಲ ನಿಲ್ಲಿಸಲಾಗಿದ್ದ ಸರಕು ರೈಲು ಮುಂದೆ ಸಾಗಿತು. ರೈಲ್ವೆ ಹಳಿಯಲ್ಲಿ ಕಾರನ್ನು ಬಿಟ್ಟು ಪರಾರಿಯಾದ ಕಾರು ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...