ಬೆಂಗಳೂರು: ಬೆಂಗಳೂರಿನಲ್ಲಿ ಕಾರ್ಮಿಕನೊಬ್ಬ ಲಾರಿ ಮಾಲಿಕನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಮೊಹಬೂಬ್ ಕೊಲೆಯಾಗಿರುವ ಲಾರಿ ಮಾಲಿಕ. ಮೆಹಬೂಬ್ ಅವರನ್ನು ಚಾಕುವಿನಿಂದ ಇರಿದು ಕಾರ್ಮಿಕ ಖಾಲಿಯಾ ಹತ್ಯೆಗೈದು ಪರಾರಿಯಾಗಿದ್ದಾನೆ.
ತಮಿಳುನಾಡು ಮೂಲದ ಆರೋಪಿ ಖಾಲಿಯಾ, ಮೆಹಬೂಬ್ ಬಳಿ ಕೆಲಸಕ್ಕಿದ್ದ. ಎರಡು ದಿನಗಳ ಹಿಂದೆ ಖಾಲಿಯಾ ಹಾಗೂ ಮೆಹಬೂಬ್ ನಡುವೆ ಜಗಳವಾಗಿತ್ತು. ಇಂದು ಭೇಟಿಗೆಂದು ಬಂದ ಖಾಲಿಯಾ ಏಕಾಏಕಿ ಮೆಹಬೂಬ್ ಅವರನ್ನು ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದಾನೆ.
ಸಂಪಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.