ಹೊಂಡುರಾಸ್‌ನ ಟೊನ್‌ಕಾಂಟಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ಪ್ರಯಾಣಿಕನೊಬ್ಬ ಗನ್ ತೆಗೆದು ಸಹಪ್ರಯಾಣಿಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ವಿಮಾನವು ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಈ ಘಟನೆ ಸಂಭವಿಸಿದ್ದು, ಇಡೀ ವಿಮಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ವಿಮಾನ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಕೂಡಲೇ ಕಾರ್ಯಪ್ರವೃತ್ತರಾಗಿ ಬಂದೂಕುಧಾರಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು ಮತ್ತು ಯಾವುದೇ ಹಾನಿಯಾಗದಂತೆ ತಡೆದರು. ನಂತರ ಪೈಲಟ್ ವಿಮಾನವನ್ನು ಟೊನ್‌ಕಾಂಟಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿ ತಿರುಗಿಸಿದ್ದಾರೆ, ಅಲ್ಲಿ ಅದು ಸುರಕ್ಷಿತವಾಗಿ ಇಳಿದಿದೆ. ವಿಮಾನವು ಮೂಲತಃ ರೋಟಾನ್‌ಗೆ ತೆರಳಬೇಕಿತ್ತು ಎಂದು ವರದಿಯಾಗಿದೆ.
ವಿಮಾನ ನಿಲ್ದಾಣಕ್ಕೆ ಬಂದ ನಂತರ, ರಾಷ್ಟ್ರೀಯ ಪೊಲೀಸ್ ಅಧಿಕಾರಿಗಳು ವಿಮಾನವನ್ನು ಪ್ರವೇಶಿಸಿ ಶಂಕಿತನನ್ನು ಬಂಧಿಸಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಅವರ ಗಮ್ಯಸ್ಥಾನಕ್ಕೆ ಕಳುಹಿಸಲಾಯಿತು ಎಂದು ವರದಿಗಳು ತಿಳಿಸಿವೆ.
ಬಂದೂಕುಧಾರಿ ಹೇಗೆ ವಿಮಾನಕ್ಕೆ ಬಂದೂಕನ್ನು ತರಲು ಸಾಧ್ಯವಾಯಿತು ಎಂಬ ವಿವರಗಳು ಇನ್ನೂ ತಿಳಿದಿಲ್ಲ. ಈ ಮಾರ್ಗದಲ್ಲಿ ಎಟಿಆರ್ 72 ವಿಮಾನಗಳನ್ನು ನಿರ್ವಹಿಸುವ ಸಿಎಂ ಏರ್‌ಲೈನ್ಸ್ ಮತ್ತು ಟ್ಯಾಗ್ ಏರ್‌ಲೈನ್ಸ್ ಎರಡೂ ಭದ್ರತಾ ಉಲ್ಲಂಘನೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಸ್ಥಳೀಯರೊಬ್ಬರು, “ಆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ತುಂಬಾ ಪರಿಣಾಮಕಾರಿಯಲ್ಲದಂತೆ ಕಾಣುತ್ತದೆ, ವಿಮಾನದಲ್ಲಿ ಇದು ಸಂಭವಿಸಿದ್ದರೆ ತುಂಬಾ ಅಪಾಯಕಾರಿ” ಎಂದು ಹೇಳಿದ್ದಾರೆ. “ಅವನು ಬಂದೂಕಿನೊಂದಿಗೆ ವಿಮಾನಕ್ಕೆ ಹೇಗೆ ಹತ್ತಿದ?” ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
Passengers on a flight from Tegucigalpa Toncontin International Airport, (TGU), Honduras to Roatan International Airport, (RTB), Honduras experienced moments of anguish when a man pulled out a firearm and threatened to kill them.
The situation caused panic on board and forced… pic.twitter.com/eH1faOhtfF
— FL360aero (@fl360aero) February 6, 2025