![](https://kannadadunia.com/wp-content/uploads/2024/12/murder.png)
ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಪತ್ನಿಯೇ ಪತಿಯನ್ನು ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸನಸೌದತ್ತಿಯಲ್ಲಿ ನಡೆದಿದೆ.
ಬಸ್ತವಾಡ ಗ್ರಾಮದ ಮಚ್ಚೇಂದ್ರ ಓಲೇಕಾರ್ ಕೊಲೆಯಾದ ದುರ್ದೈವಿ. ಸಿದ್ದವ್ವ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದಿದ್ದಾಳೆ. ಜ.5ರಂದು ಸುಗಂಧಾದೇವಿ ದರ್ಶನಕ್ಕೆಂದು ಪತಿಯನ್ನು ಕರೆದೊಯ್ದ ಸಿದ್ದವ್ವ, ಕೃಷ್ಣಾನದಿ ದಂಡೆಯ ಮೇಲೆ ಸ್ನಾನ ಮಾಡುವಾಗ ಪತಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ. ಸಿದ್ದವ್ವ ಹಾಗೂ ಆಕೆಯ ಪ್ರಿಯಕರ ಗಣಪತಿ ಸೇರಿ ಈ ಕೃತ್ಯವೆಸಗಿದ್ದಾರೆ.
ಕೊಲೆ ಬಳಿಕ ಶವವನ್ನು ಕೃಷ್ಣಾನದಿಗೆ ಬಿಸಾಕಿ ಪರಾರಿಯಾಗಿದ್ದಾರೆ. ನದಿಯಲ್ಲಿ ಶವ ಪತ್ತೆಯಾದ ಬಳಿಕ ತನಿಖೆ ನಡೆಸಿದ ಪೊಲೀಸರು ಇದೀಗ ಸಿದ್ದವ್ವ ಹಾಗೂ ಗಣಪತಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತಾವೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.