ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿ ಜಾಮೀನು ಮೇಲೆ ಬಿಡಿಗಡೆಯಾಗಿರುವ ನಟ ದರ್ಶನ್ ಇದೇ ಮೊದಲ ಬಾರಿಗೆ ಅಭಿಮಾನಿಗಳಿಗೆ ವಿಡಿಯೋ ಮೂಲಕ ಸಂದೇಶವೊಂದನ್ನು ಹೇಳಿದ್ದಾರೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಹಾಗಾಗಿ ಕ್ಷಮಿಸಿ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಮಾತನಾಡಿರುವ ದರ್ಶನ್, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಅಭಿಮಾನಿಗಳಿಗೆ, ಸೆಲೆಬ್ರೆಟಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಮೂವರಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ.
ನಮ್ಮ ಹಿರೋ ಧನ್ವೀರ್, ಬುಲ್ ಬುಲ್ ರಚಿತಾ ರಾಮ್ ಹಾಗೂ ಪ್ರಾಣ ಸ್ನೇಹಿತೆ ರಕ್ಷಿತಾ ಅವರಿಗೆ ಧನ್ಯವಾದ ಹೇಳುತ್ತೇನೆ. ಹಿರೋ ಧನ್ವೀರ್ ಯಾವಾಗಲೂ ಜೊತೆಯಲ್ಲೇ ಇದ್ದು, ಮಾರೆಲ್ ಸಪೋರ್ಟ್ ನೀಡಿದ್ದಾರೆ. ಇನ್ನು ಬುಲ್ ಬುಲ್ ರಚಿತಾರಾಮ್ ಹಾಗೂ ನನ್ನ ಪ್ರಾಣ ಸ್ನೇಹಿತೆ ರಕ್ಷಿತಾ ಪ್ರೇಮ್ ಇವರೆಲ್ಲರೂ ನನಗೆ ಬಹಳ ಬೆಂಬಲವಾಗಿ ನಿಂತು, ಸದಾ ನನ್ನ ಜೊತೆ ಈಗಲೂ ಸಂಪರ್ಕದಲ್ಲಿದ್ದಾರೆ. ಮೂವರಿಗೂ ವಿಶೇಷವಾಗಿ ಧನ್ಯವಾದಗಳು. ಅವರಿಗೆ ಎಷ್ಟೇ ಥ್ಯಾಂಕ್ಸ್ ಎಂದರೂ ಕಡಿಮೆಯೇ. ಧನ್ಯವಾದ ಎನ್ನುವುದು ಬಹಳ ಸಣ್ಣ ಪದ ಎನಿಸುತ್ತದೆ. ನಿಮ್ಮ ಪ್ರೀತಿ-ಅಭಿಮಾನ, ಪ್ರೋತ್ಸಾಹ ಸದಾಕಾಲ ಹೀಗೆ ಇರಲಿ ಎಂದು ತಿಳಿಸಿದ್ದಾರೆ.