ದೇಶದ ಗಮನ ಸೆಳೆದ ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಆಡಳಿತರೂಢ ಆಪ್ ಮೂರನೇ ಬಾರಿ ಅಧಿಕಾರಿಗಳ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿತ್ತು ಆದರೆ ಚುನಾವಣಾ ಫಲಿತಾಂಶದಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ.
ಎಎಪಿ ಮುಖ್ಯಸ್ಥ ಅರವಿಂದ ಕೇಜ್ರವಾಲ್, ದಿಲ್ಲಿ ಸಿಎಂ ಅತಿಶಿ, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಸೇರಿ ಎಎಪಿ ಪಕ್ಷದ ಪ್ರಭಾವಿ ನಾಯಕರು ಹಿನ್ನಡೆಯಲ್ಲಿದ್ದಾರೆ.
ಅರವಿಂದ ಕೇಜ್ರವಾಲ್ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಲ್ಕಾಜಿ ಕ್ಷೇತ್ರದಿಂದ ಸಿಎಂ ಅತಿಶಿ ಸ್ಪರ್ಧಿಸಿದ್ದಾರೆ. ಮತ ಎಣಿಕೆ ಆರಂಭವಾದಾಗಿನಿಂದಲೂ ಅರವಿಂದ್ ಕೇಜ್ರವಾಲ್ ಹಿನ್ನಡೆಯಾಗಿದೆ. ಬಿಜೆಪಿಯ ಪರ್ವೇಶ್ ವರ್ಮಾ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸದ್ಯದ ಟ್ರೆಂಡ್ ನೋಡಿದರೆ ಕೇಜ್ರಿವಾಲ್ ಗೆಲ್ಲುತ್ತಾರೆಯೇ ಎನ್ನುವ ಪ್ರಶ್ನೆ ಮೂಡಿದೆ , ಸದ್ಯದ ಅಂಕಿ ಸಂಖ್ಯೆಗಳನ್ನ ನೋಡಿದರೆ ಬಿಜೆಪಿ 45 ಮುನ್ನಡೆ ಬಳಸಿಕೊಂಡು ಸ್ಪಷ್ಟ ಬಹುಮತ ಪಡೆದುಕೊಂಡಿದ್ದು, ಹಾಗೂ ಎಎಪಿ 25 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ, ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಅಧಿಕಾರದ ಗದ್ದುಗೆ ಏರುವುದು ಬಹುತೇಕ ಫಿಕ್ಸ್ ಆಗಿದೆ.