ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮತ ಎಣಿಕೆ ಚುರುಕುಗೊಂಡಿದೆ. ಈವರೆಗಿನ ಮಾಹಿತಿ ಪ್ರಕಾರ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಆಮ್ ಆದ್ಮಿ ಪಕ್ಷ ಹಿನ್ನಡೆಯಲ್ಲಿದೆ. ಇನ್ನು ಕಾಂಗ್ರೆಸ್ ಪಕ್ಷ ಯಾವುದೇ ಖಾತೆ ತೆರೆದಿಲ್ಲ. ಇದು ಕಾಂಗ್ರೆಸ್ ಗೆ ಬಿಗ್ ಶಾಕ್ ನೀಡಿದೆ.
ದೆಹಲಿ ಚುನಾವಣಾ ಫಲಿತಾಂಶದ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಗೃಹ ಸಚಿವ ಪರಮೇಶ್ವರ್, ಮೈತ್ರಿ ಎಲ್ಲಾ ಕಾಲದಲ್ಲೂ ಒಂದೇ ರೀತಿ ಇರಲ್ಲ. ರಿಸಲ್ಟ್ ಕಂಪ್ಲೀಟ್ ಆಗಲಿ. ಆಮೇಲೆ ಚರ್ಚಿಸೋಣ ಎಂದು ಹೇಳಿದರು.
ಫಲಿತಾಂಶದ ಬಗ್ಗೆ ಎಐಸಿಸಿ ನಾಯಕರು ಚರ್ಚೆ ಮಾಡುತ್ತಾರೆ. ಒಂದೊಂದು ಚುನಾವಣೆ ಒಂದೊಂದು ರೀತಿ ಇರುತ್ತದೆ. ಬೇರೆ ರಾಜ್ಯದ ಮೇಲೆ ಈ ಫಲಿತಾಂಶ ಅಷ್ಟೊಂದು ಪರಿಣಾಮ ಬೀರಲ್ಲ. ಪ್ರತಿಯೊಂದು ಚುನಾವಣೆ ವಿಭಿನ್ನವಾಗಿ ಇರುತ್ತದೆ ಎಂದು ತಿಳಿಸಿದರು.