ಚೇತನ್ ಶೆಟ್ಟಿ ನಿರ್ದೇಶನದ ಸಿದ್ದು ಮೂಲಿಮನಿ ಅಭಿನಯದ ‘ಸೀಟ್ ಎಡ್ಜ್’ ಚಿತ್ರದ ”ಸಾರಿ ಹೇಳುವೆ ಜಗಕ್ಕೆ” ಎಂಬ ಬ್ಯೂಟಿಫುಲ್ ಮೆಲೋಡಿ ಹಾಡು ಯುಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಈ ಹಾಡಿಗೆ ಧ್ವನಿಯಾಗಿದ್ದು, ಆಕಾಶ್ ಪರ್ವ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಸಿದ್ದು ಕೋಡಿಪುರ ಅವರ ಸಾಹಿತ್ಯವಿದೆ.
ರೊಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ ಅವರಿಗೆ ಜೋಡಿಯಾಗಿ ರವಿಕ್ಷಾ ಶೆಟ್ಟಿ ಅಭಿನಯಿಸಿದ್ದು, ರಘು ರಾಮನಕೊಪ್ಪ, ಗಿರಿ ಶಿವಣ್ಣ, ಮಿಮಿಕ್ರಿ ಗೋಪಿ, ಉಳಿದ ಪಾತ್ರ ವರ್ಗದಲ್ಲಿದ್ದಾರೆ. n.r ಸಿನಿಮಾ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಗಿರಿಧರ ಟಿ ವಸಂತಪುರ ನಿರ್ಮಾಣ ಮಾಡಿದ್ದು, ನಾಗೇಂದ್ರ ಉಜ್ಜನಿ ಸಂಕಲನ, ಹಾಗೂ ದೀಪಕ್ ಕುಮಾರ್ ಜೆ ಛಾಯಾಗ್ರಹಣವಿದೆ.