![](https://kannadadunia.com/wp-content/uploads/2025/02/blg-police.jpg)
ಬೆಳಗಾವಿ: ಇನ್ಸ್ ಪೆಕ್ಟರ್ ಓರ್ವರು ಪೊಲೀಸ್ ಠಾಣೆಯ ಮುಂದೆ ತಂದೆಯ ಶವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರುಗೇರಿಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯ ಇನ್ ಪೆಕ್ಟರ್ ಅಶೋಕ್ ಸದಲಗಿ ಹಾರೂಗೇರಿ ಪೊಲಿಸ್ ಠಾಣೆಯ ಪಿಎಸ್ ಐ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ್ದಾರೆ.
ಇನ್ಸ್ ಪೆಕ್ಟರ್ ಅಶೋಕ್ ಸದಲಗಿ ತಂದೆ ಅಣ್ಣಪ್ಪ ಅವರ ಜಮೀನಿಗೆ ಬಾಬು ನೋಡಣಿ, ಪ್ರತಾಪ್ ಹರೋಲಿ, ವಸಂತ ಚೌಗಲಾ ಎಂಬುವವರು ಅಕ್ರಮವಾಗಿ ಪ್ರವೇಶ ಮಾಡಿದ್ದರು. ಜ.10ರಂದು ಈ ಘಟನೆ ನಡೆದಿತ್ತು. ಅಕ್ರಮವಾಗಿ ಜಮೀನಿಗೆ ಪ್ರವೇಶಿಸಿರುವುದನ್ನು ಪ್ರಶ್ನಿಸಿದ್ದಕ್ಕೆ ಅಣ್ಣಪ್ಪ ಅವರ ಮೇಲೆ ಬಾಬು, ವಸಂತ, ಪ್ರತಾಪ್ ಗ್ಯಾಂಗ್ ಹಲ್ಲೆ ನಡೆಸಿದೆ. ತಕ್ಷಣ ಅಣ್ಣಪ್ಪ ಅವರು 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಕರೆದಿದ್ದರು. ಬಳಿಕ ಅಣ್ಣಪ್ಪ, ಬಾಬು ನಡೋಣಿ ಸೇರಿ ಎಲ್ಲರನ್ನೂ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ ಅನ್ನಪ್ಪ ಅವರಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಂಜೆ ವೇಳೆಗೆ ಅಣ್ಣಪ್ಪ ಅವರ ಶುಗರ್ ಡೌನ್ ಆಗಿದೆ. ಬಿಪಿ ಹೆಚ್ಚಾಗಿದೆ ತೀವ್ರವಾಗಿ ಅಸ್ವಸ್ಥರಾದ ಅಣ್ಣಪ್ಪ ಅವರನ್ನು ಎರಡನೇ ಪುತ್ರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಇನ್ಸ್ ಪೆಕ್ಟರ್ ಅಶೋಕ್ ಹಾರೂಗೇರಿ ಪಿಎಸ್ ಐ, ಸಿಪಿಐ, ಅಥಣಿ ಡಿವೈ ಎಸ್ ಪಿ ಅವರಿಗೆ ಮನವಿ ಮಾಡಿದ್ದರು. ಆದಾಗ್ಯೂ ದೂರು ದಾಖಲಿಸಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ಸ್ ಪೆಕ್ಟರ್ ಅಶೋಕ್ ಸಹೋದರನ ಮೇಲೆ ಪಿಎಸ್ ಐ ಮಾಳಪ್ಪ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.
ಇನ್ಸ್ ಪೆಕ್ಟರ್ ಅಶೋಕ್ ತಂದೆ ಅಣ್ಣಪ್ಪ ಇಂದು ಚಿಕಿತ್ಸೆ ಫಲಿಸದೇಸಾವನ್ನಪ್ಪಿದ್ದಾರೆ. ಈ ಎಲ್ಲಾ ಘಟನೆಗಳಿಂದ ನೊಂದ ಇನ್ಸ್ ಪೆಕ್ಟರ್ ಅಶೋಕ್, ತಂದೆಯ ಶವದೊಂದಿಗೆ ಹಾರೂಗೇರಿ ಪೊಲೀಸ್ ಠಾಣೆಗೆ ತೆರಳಿ ಠಾಣೆಯ ಮುಂದೆ ಶವವಿಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಪಿಎಸ್ ಐ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳಗಾವಿ ಎಸ್ ಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕಾಗಮಿಸಿ ಚಿಕ್ಕೋಡಿ ಡಿವೈ ಎಸ್ ಪಿ ಇನ್ಸ್ ಪೆಕ್ಟರ್ ಅಶೋಕ್ ಮನವೊಲಿಸಿ ಪರಿಸ್ಥಿತಿ ಶಾಂತಗೊಳಿಸಿದ್ದು, ಸದ್ಯ ಇನ್ಸ್ ಪೆಕ್ಟರ್ ಧರಣಿ ಕೈಬಿಟ್ಟಿದ್ದಾರೆ.