![](https://kannadadunia.com/wp-content/uploads/2022/03/R-Ashok-1.jpg)
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದಂತಿದೆ. ರಾಜ್ಯ ನಾಯಕರಿಗೆ ಬಿಜೆಪಿ ರಾಜ್ಯ ಉಸ್ತುವಾರಿಗಳು ಖಡಕ್ ಸೂಚನೆ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ, ಭಿನ್ನಾಭಿಪ್ರಾಯ ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಡಲು ನಮಗೆ ಒಳ್ಲೆಯ ಅವಕಾಶ ಸಿಕ್ಕಿರುವಾಗ ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸದೇ ನಮ್ಮಲ್ಲೇ ಬಡಿದಾಟ ನಡೆಸುತ್ತಿರುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ರಾಜ್ಯ ಉಸ್ತುವಾರಿಗಳು ಖಡ್ಕ್ ಸೂಚನೆ ನೀಡಿದ್ದಾರೆ. ಏನೇ ಮಾತನಾಡಿದರೂ ನಾಲ್ಕು ಗೋಡೆ ಮಧ್ಯೆ ಮಾತನಾಡಬೇಕು. ಉಸ್ತುವಾರಿಗಳು ಹೇಳಿರುವುದಕ್ಕೇ ನಾಯಕರಿಗೂ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ವರಿಷ್ಠರು, ಉಸ್ತುವಾರಿಗಳು, ನಮ್ಮ ಅಭಿಪ್ರಾಯಗಳು ಎಲ್ಲವೂ ಒಂದೆ ಆಗಿದೆ. ಯಾರೂ ಕೂದ ಹಾದಿಬೀದಿಯಲ್ಲಿ ಮಾತನಾಡಬಾರದು. 15-20 ದಿನಗಳಲ್ಲಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಹೈಕಮಾಂಡ್ ನಿರ್ಧಾರದ ಬಳಿಕ ಎಲ್ಲವೂ ನಾರ್ಮಲ್ ಆಗಲಿದೆ ಎಂದು ಹೇಳಿದರು.