ಬೆಂಗಳೂರು : 2024-25ನೇ ಸಾಲಿನ NMMS ಪರೀಕ್ಷೆಯನ್ನು ದಿನಾಂಕ:02.02.2025 ಭಾನುವಾರದಂದು ಕೆ.ಎಸ್.ಇ.ಎ.ಬಿಯ ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗಿರುತ್ತದೆ. ಸದರಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗೆ ಸಂಬಂಧಿಸಿದ ಕೀ ಉತ್ತರಗಳನ್ನು ದಿನಾಂಕ:06.02.2025 ರಂದು ಮಂಡಳಿಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಈ ಕಛೇರಿಯಿಂದ ನೀಡಲಾದ ನಿಗದಿತ ನಮೂನೆ (ಮಂಡಳಿಯ ವೆಬ್ ಸೈಟ್ನಲ್ಲಿ https://kseab.karnataka.gov.in/ ದೊರೆಯುತ್ತದೆ) ಯಲ್ಲಿ ದಿನಾಂಕ: 06.02.2025 ರಿಂದ 08.02.2025 ರ ಸಂಜೆ 5.30 ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
NMMS ಪರೀಕ್ಷೆಯ ಪ್ರಶ್ನೆಪತ್ರಿಕೆ-1 ಮತ್ತು 2ರ ಪ್ರತಿ ಪ್ರಶ್ನೆಗಳಿಗೆ ಪ್ರತ್ಯೇಕವಾಗಿ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಇ-ಮೇಲ್ ಮೂಲಕ (ksqaacntsenmms@gmail.com) ಅಥವಾ ಅಂಚೆ ಮೂಲಕ ಕಾರ್ಯನಿರ್ವಾಹಕ ನಿರ್ದೇಶಕರು, ಕೆ.ಎಸ್.ಕ್ಯು.ಎ.ಎ.ಸಿ, ಕೆ.ಎಸ್.ಇ.ಎ.ಬಿ, 1ನೇ ಮಹಡಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಈ ವಿಳಾಸಕ್ಕೆ ದಿನಾಂಕ:08.02.2025 ರ ಸಂಜೆ 5.30ರ ಒಳಗೆ ತಲುಪುವಂತೆ ಸಲ್ಲಿಸುವುದು. ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಬರುವಂತಹ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
![](https://kannadadunia.com/wp-content/uploads/2025/02/nmms-1.jpg)
![](https://kannadadunia.com/wp-content/uploads/2025/02/NMMS-2.jpg)
![](https://kannadadunia.com/wp-content/uploads/2025/02/NMMS-3.jpg)
![](https://kannadadunia.com/wp-content/uploads/2025/02/NMMS-4.jpg)