ಕಲಬುರಗಿ : ಪತ್ನಿಯೋರ್ವಳು ತನ್ನ ಗಂಡನ 2 ಕಾಲು ಮುರಿಯಲು ಹೇಳಿ 5 ಲಕ್ಷ ಸುಪಾರಿ ನೀಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಪರಸ್ತ್ರೀ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಪತಿಯ ಕಾಲನ್ನು ಪತ್ನಿ ಮುರಿಸಿದ್ದಾಳೆ. ಕಲಬುರ್ಗಿ ನಗರದ ಅತ್ತರ ಕಾಂಪೌಂಡ್ ಬಳಿ ಈ ಘಟನೆ ನಡೆದಿದೆ.
ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತ್ನಿ ಪತಿಯ ಕಾಲು ಮುರಿದ್ರೆ ಸುಮ್ಮನೆ ಮನೆಯಲ್ಲಿ ಇರುತ್ತಾರೆ ಎಂದು ಅಂದುಕೊಂಡ ಪತ್ನಿ ಉಮಾದೇವಿ ಪತಿ ವೆಂಕಟೇಶ್ ಕಾಲು ಮುರಿಸಿದ್ದಾಳೆ. ಕೃತ್ಯ ಎಸಗಿದ ಆರಿಫ್, ಮನೋಹರ್, ಸುನೀಲ್ ಸೇರಿದಂತೆ ಉಮಾದೇವಿಯನ್ನ ಪೊಲೀಸರು ಬಂಧಿಸಿದ್ದಾರೆ.ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.