ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ತೆರಳಲು ರೈಲಿನ ಶೌಚಾಲಯದಲ್ಲಿ ಪ್ರಯಾಣಿಸುತ್ತಿರುವ ಯುವತಿಯರ ವಿಡಿಯೋ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕುಂಭ ಮೇಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ, ಜನಸಂದಣಿಯನ್ನು ತಪ್ಪಿಸಲು ಶೌಚಾಲಯದಲ್ಲಿ ಪ್ರಯಾಣಿಸುತ್ತಿದ್ದೇವೆ ಎಂದು ಯುವತಿಯರು ವಿಡಿಯೋದಲ್ಲಿ ಹೇಳಿದ್ದಾರೆ.
ವಿಡಿಯೋದಲ್ಲಿ, ಯುವತಿಯೊಬ್ಬಳು ಶೌಚಾಲಯದ ಕಮೋಡ್ ಮೇಲೆ ನಿಂತುಕೊಂಡು, ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಶೌಚಾಲಯದಲ್ಲಿ ಪ್ರಯಾಣಿಸುತ್ತಿರುವುದಾಗಿ ಹೇಳಿದ್ದಾಳೆ. ಹೊರಗೆ ಜನಸಂದಣಿ ಹೆಚ್ಚಾಗಿರುವುದರಿಂದ ಶೌಚಾಲಯದಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದೇವೆ ಎಂದು ಆಕೆ ಹೇಳಿದ್ದಾಳೆ. ಅಲ್ಲದೆ, ಹೊರಗಿನ ಜನರಿಗೆ ತೊಂದರೆಯಾಗದಂತೆ ಶೌಚಾಲಯದ ಬಾಗಿಲು ತೆರೆಯದಂತೆ ತನ್ನ ಗೆಳತಿಗೆ ಸೂಚಿಸಿದ್ದಾಳೆ.
700,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಈ ವಿಡಿಯೋ ಅನೇಕ ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ಶೌಚಾಲಯದ ದುರ್ಬಳಕೆ ಮತ್ತು ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದ್ದಕ್ಕಾಗಿ ಯುವತಿಯರನ್ನು ಟೀಕಿಸಿದ್ದಾರೆ.
ಟೀಕೆಗಳಿಗೆ ಪ್ರತಿಕ್ರಿಯಿಸಿದ ಯುವತಿ, ತಾವು ವೈರಲ್ ಆಗಿರುವುದಕ್ಕೆ ಸಂಭ್ರಮಿಸಿದ್ದಾಳೆ. ಟಿಕೆಟ್ ಇಲ್ಲದೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ಶೌಚಾಲಯದಲ್ಲಿ ಪ್ರಯಾಣಿಸಿದ್ದಾಗಿ ಆಕೆ ಹೇಳಿದ್ದಾಳೆ. ಬೇರೆ ದಾರಿ ಇರಲಿಲ್ಲ ಎಂದು ಆಕೆ ಸಮರ್ಥಿಸಿಕೊಂಡಿದ್ದಾಳೆ.
ಅನೇಕ ಬಳಕೆದಾರರು ಭಾರತೀಯ ರೈಲ್ವೆ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ, ಯುವತಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ವಿವಾದದ ನಡುವೆಯೂ, ಯುವತಿ ಕೆಲ ದಿನಗಳ ನಂತರ ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾಳೆ.
Woman, her friends travel inside train toilet to Maha Kumbh, viral video disgusts internet https://t.co/bgTxYQKaNa
— Nayan Singh (@NayanSingh34280) February 6, 2025