alex Certify ಮೊದಲ ಪತಿ ಇದ್ದರೂ ಪತ್ನಿ 2 ನೇ ಪತಿಯಿಂದ ಜೀವನಾಂಶ ಪಡೆಯಬಹುದು; ʼಸುಪ್ರೀಂʼ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಪತಿ ಇದ್ದರೂ ಪತ್ನಿ 2 ನೇ ಪತಿಯಿಂದ ಜೀವನಾಂಶ ಪಡೆಯಬಹುದು; ʼಸುಪ್ರೀಂʼ ಮಹತ್ವದ ತೀರ್ಪು

ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಮೊದಲ ಪತಿಯಿಂದ ಬೇರೆಯಾದ ಮಹಿಳೆ ತನ್ನ ಎರಡನೇ ಪತಿಯಿಂದ ಜೀವನಾಂಶವನ್ನು ಪಡೆಯಲು ಅರ್ಹಳು ಎಂದು ಹೇಳಿದೆ.

ಮೊದಲ ವಿವಾಹವು ಇನ್ನೂ ಚಾಲ್ತಿಯಲ್ಲಿದ್ದರೂ, ಆಕೆಯ ಹಕ್ಕುಗಳನ್ನು ಅದು ಕಸಿದುಕೊಳ್ಳುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೀವನಾಂಶವು ಹೆಂಡತಿಗೆ ಕೇವಲ ಒಂದು ಸೌಲಭ್ಯವಲ್ಲ, ಬದಲಿಗೆ ಗಂಡನ ಕಾನೂನು ಮತ್ತು ನೈತಿಕ ಕರ್ತವ್ಯ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠ ಹೇಳಿದೆ.

ಈ ತೀರ್ಪಿನ ಮೂಲಕ, ಸರ್ವೋಚ್ಚ ನ್ಯಾಯಾಲಯವು ತೆಲಂಗಾಣ ಹೈಕೋರ್ಟ್‌ನ 2017 ರ ಆದೇಶವನ್ನು ರದ್ದುಗೊಳಿಸಿದ್ದು, ಹೈಕೋರ್ಟ್ ತನ್ನ ಆದೇಶದಲ್ಲಿ, ಮಹಿಳೆಯ ಮೊದಲ ವಿವಾಹವು ಇನ್ನೂ ಚಾಲ್ತಿಯಲ್ಲಿರುವುದರಿಂದ ಆಕೆಯನ್ನು ಎರಡನೇ ಪತಿಯ ಕಾನೂನುಬದ್ಧ ಹೆಂಡತಿಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ತಿರಸ್ಕರಿಸಿದೆ.

ಮಹಿಳೆ ಪರ ವಕೀಲರು, ಮಹಿಳೆ ಮತ್ತು ಪ್ರತಿವಾದಿ, ದಂಪತಿಗಳಂತೆ ವಾಸಿಸುತ್ತಿದ್ದರು ಮತ್ತು ಮಗುವನ್ನು ಒಟ್ಟಿಗೆ ಬೆಳೆಸುತ್ತಿದ್ದರು. ಅಲ್ಲದೆ ಮೊದಲ ವಿವಾಹದ ಬಗ್ಗೆ ಎರಡನೇ ಪತಿಗೆ ತಿಳಿದಿತ್ತು ಎಂದು ವಾದಿಸಿದ್ದರು. ಆದರೆ ಅರ್ಜಿದಾರ, ಮಹಿಳೆ ಮೊದಲ ಪತಿಗೆ ಕಾನೂನುಬದ್ಧವಾಗಿ ವಿವಾಹಿತರಾಗಿರುವುದರಿಂದ, ಆಕೆಯನ್ನು ತನ್ನ ಹೆಂಡತಿಯೆಂದು ಪರಿಗಣಿಸಲು ಸಾಧ್ಯವಿಲ್ಲ ಮತ್ತು ಜೀವನಾಂಶವನ್ನು ಪಡೆಯಲು ಸಾಧ್ಯವಿಲ್ಲ ಎಂದು ಎರಡನೇ ಪತಿ ವಾದಿಸಿದ್ದರು. ಈ ವಾದವನ್ನು ನ್ಯಾಯಪೀಠ ಒಪ್ಪಲಿಲ್ಲ.

ಹಿನ್ನೆಲೆ:

ಮಹಿಳೆ 1999 ರಲ್ಲಿ ವಿವಾಹವಾಗಿದ್ದು, 2000 ರಲ್ಲಿ ಮಗುವಿಗೆ ಜನ್ಮ ನೀಡಿದ್ದರು. 2005 ರಲ್ಲಿ ಅವರು ಬೇರೆ ಬೇರೆಯಾಗಿ ವಾಸಿಸಲು ಪ್ರಾರಂಭಿಸಿದ್ದು ಮತ್ತು 2011 ರಲ್ಲಿ ಒಪ್ಪಂದದ ಮೂಲಕ ವಿವಾಹವನ್ನು ಕೊನೆಗೊಳಿಸಿದ್ದರು. ನಂತರ ಅವರು ಮತ್ತೊಂದು ವಿವಾಹವಾಗಿದ್ದು. ಕೆಲವು ತಿಂಗಳ ನಂತರ, ಎರಡನೇ ಪತಿ ವಿವಾಹವನ್ನು ರದ್ದುಗೊಳಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಹೋದರು.

ನ್ಯಾಯಾಲಯವು 2006 ರ ವಿವಾಹವನ್ನು ಅಮಾನ್ಯವೆಂದು ಘೋಷಿಸಿತ್ತು. ಕೆಲವು ದಿನಗಳ ನಂತರ, ಮಹಿಳೆ ಪ್ರತಿವಾದಿಯನ್ನು ಮರುಮದುವೆಯಾಗಿದ್ದು, ದಂಪತಿಗೆ 2008 ರಲ್ಲಿ ಮಗಳು ಜನಿಸಿದ್ದಳು. ನಂತರ ಭಿನ್ನಾಭಿಪ್ರಾಯಗಳಿಂದಾಗಿ, ಮಹಿಳೆ ವರದಕ್ಷಿಣೆ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದು, ಜೀವನಾಂಶಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ನ್ಯಾಯಾಲಯವು ಜೀವನಾಂಶವನ್ನು ಆದೇಶಿಸಿದ್ದು, ಇದನ್ನು ಪ್ರತಿವಾದಿಯ ಮೇಲ್ಮನವಿಯ ಮೇರೆಗೆ ಹೈಕೋರ್ಟ್ ರದ್ದುಗೊಳಿಸಿತ್ತು. ನಂತರ ಮಹಿಳೆ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದು, ಅಲ್ಲಿ ಅವರು ಅಂತಿಮವಾಗಿ ಜಯಗಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...