![](https://kannadadunia.com/wp-content/uploads/2025/02/anedali-.jpg)
ಚೆನ್ನೈ: ಒಂಟಿ ಸಲಗದ ದಾಳಿಗೆ ಜರ್ಮನ್ ಮೂಲದ ಪ್ರವಾಸಿಗ ಬಲಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಎಟಿಆರ್ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ದಾಳಿಗೆ ಜರ್ಮನ್ ಪ್ರವಾಸಿಗ ಸಾವನ್ನಪ್ಪಿದ್ದಾರೆ. ಮೈಕೆಲ್ ಶುಲ್ಜ್ (77) ಮೃತ ಪ್ರವಾಸಿಗ. ಟೈಗರ್ ವ್ಯಾಲಿ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಮೈಕೆಲ್ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಬೈಕ್ ಸಮೇತ ಎತ್ತಿ ಬಿಸಾಕಿದೆ.
ಕಾಡಾನೆ ದಾಳಿಗೆ ಗಂಭೀರವಾಗಿ ಗಾಯಗೊಂಡ ಮೈಕೆಲ್ ಶುಲ್ಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ನ ಹಿಂದೆ ಬರುತ್ತಿದ್ದ ಪ್ರವಾಸಿಗರ ಇನ್ನೊಂದು ವಾಹನದಲ್ಲಿದ್ದ ಕ್ಯಾಮರಾದಲ್ಲಿ ಆನೆ ದಾಳಿ ಸೆರೆಯಾಗಿದೆ.