ಫೆಬ್ರವರಿ 5 ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಒಂದು ವಿಚಿತ್ರ ಘಟನೆ ನೆಟ್ಟಿಗರ ಗಮನ ಸೆಳೆದಿದೆ.
ಇದು ಆನ್ ಲೈನ್ ನಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ ಮತದಾರರು ತಮ್ಮ ಅಳಿಸಲಾಗದ ಶಾಯಿ ಗುರುತು ಮಾಡಿದ ಬೆರಳುಗಳನ್ನು ಹೆಮ್ಮೆಯಿಂದ ತೋರಿಸುತ್ತಿದ್ದಂತೆ, ಎಕ್ಸ್ ನಲ್ಲಿನ ಒಂದು ನಿರ್ದಿಷ್ಟ ಪೋಸ್ಟ್ ವಿಚಿತ್ರ ಫೋಟೋದಿಂದಾಗಿ ವೈರಲ್ ಆಗಿದೆ. ಚಿತ್ರವು ಮತದಾರರ ತೋರುಬೆರಳನ್ನು ಅಳಿಸಲಾಗದ ಶಾಯಿಯಲ್ಲಿ ಮುಳುಗಿಸಿರುವುದನ್ನು ತೋರಿಸುತ್ತದೆ – ಆದರೆ ಬೆರಳಿನಲ್ಲಿ ಭಾರಿ ಪ್ರಮಾಣದ ಶಾಯಿ ಇತ್ತು.ಈ ಪೋಸ್ಟ್ ತ್ವರಿತವಾಗಿ ಗಮನ ಸೆಳೆಯಿತು, 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿತು.
ಈ ಪೋಸ್ಟ್ ಗೆ ತರಹೇವಾರಿ ಕಮೆಂಟ್ ಗಳು ಬಂದಿದೆ. ಬ್ರೋ 2125 ರವರೆಗೆ ಮತ ಚಲಾಯಿಸಿದ್ದಾರೆ” ಎಂದು ಎಕ್ಸ್ ಬಳಕೆದಾರರೊಬ್ಬರು ತಮಾಷೆಯಾಗಿ ಹೇಳಿದರು.”ಜಬ್ ಪೂರೆ ಗಾಂವ್ ವಾಲೋ ಕಿ ತಾರಾಹ್ ಸೆ ಏಕ್ ಹಿ ಆದ್ಮಿ ವೋಟ್ ಡೆನೆ ಜಾಯೆ (ಒಬ್ಬ ವ್ಯಕ್ತಿಯು ಇಡೀ ಗ್ರಾಮದ ಪರವಾಗಿ ಮತ ಚಲಾಯಿಸಿದ್ದಾರೆ)” ಎಂದು ಇನ್ನೊಬ್ಬರು ಟೀಕಿಸಿದರು.