ವಿಜಯನಗರ: ಹೂಡಿಕೆ ಮಾಡಿದರೆ ಅತ್ಯಧಿಕ ಬಡ್ಡಿಯೊಂದಿಗೆ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಹೊಸಪೇಟೆ ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಮಹಿಳೆಯರು ಸೇರಿದಂತೆ 8 ಜನರ ಗ್ಯಾಂಗ್ ಹೂಡಿಕೆ ಹೆಸರಲ್ಲಿ ಜನರನ್ನು ವಂಚಿಸುತ್ತಿತ್ತು. ನಗರದ ಮುಮಾಜ್ ಬೇಗಂ ಸೇರಿದಂತೆ 8 ಜನರ ಗುಂಪು ಕಳೆದ ಒಂದು ವರ್ಷದಿಂದ ವಂಚನೆಯನ್ನೇ ಕಾಯಕವನ್ನಾಗಿ ಮಾಡಿಕೊಂಡು ಜನರನ್ನು ನಂಬಿಸಿ ಹಣ ಪಡೆಯುತ್ತಿದ್ದರು. ಅನೀಶ್ ಎಂಬುವವರಿಗೆ 1.20 ಲಕ್ಷ ವಂಚಿಸಿದ್ದರೆ, ರಾಘವೇಂದ್ರ ಎಂಬುವವರಿಗೆ 30 ಲಕ್ಷ ರೂಪಾಯಿ ವಂಚಿಸಲಾಗಿದೆ.
ಅನೀಶ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಮುಮ್ತಾಜ್ ಬೇಗಂ, ನಸ್ರೀನ್, ಅರಿಫಾ ಬೇಗಂ, ಜಾವೀದ್, ಆರ್.ನಭಿರಸೂಲ್, ಬೆಂಗಳೂರಿನ ತಸ್ಲಿಂ ಬಾನು, ಸೈಯದ್ ಜುಬೇರ್ ಹಾಗೂ ಕೇರಳದ ಕೋಯಿಕ್ಕೋಡ್ ನ ಜಬೀರ್ ಸೇರಿ 8 ಜನರ ವಿರುದ್ಧ ದೂರು ನೀಡಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗಿದೆ.