ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಡಿ ಘಾಟ್ ನಲ್ಲಿ ಸಂಭವಿಸಿದ್ದ ಕಾಡ್ಗಿಚ್ಚು ಪ್ರಕರಣದ ಕಾರಣ ತನಿಖೆಯಲ್ಲಿ ಬಯಲಾಗಿದೆ.
ಚಾರ್ಮಡಿ ಘಾಟ್ ನ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿರುವುದು ಅರಣ್ಯ ಇಲಾಖೆ ತನಿಖೆಯಲ್ಲಿ ಪತ್ತೆಯಾಗಿದೆ. ಬೆಂಕಿಯ ತೀವ್ರತೆಗೆ ಕೋಯಂತರ ಮೌಲ್ಯದ ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ. ಕಿಡಿಗೇಡಿಗಳ ಕೃತ್ಯದ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದು, ಕಿಡಿಗೇಡಿಗಳ ದುಷ್ಕೃತ್ಯ ಬಯಲಾಗಿದೆ.
ರಾತ್ರಿ ವೇಳೆ ಶಿಕಾರಿಗೆ ತೆರಳಿದ್ದ ವೇಳೆಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಾಕಿದ್ದು, ಅದು ಕಾಡ್ಗಿಚ್ಚಾಗಿ ಹಬ್ಬಿದೆ. ಪ್ರಕರಣ ಸಂಬಂಧ ಮೂಡಿಗೆರೆ ಅರಣ್ಯ ಇಲಾಖೆಯಿಂದ ಎಫ್ಐಆರ್ ದಾಖಲಾಗಿದೆ. ಕಿಡಿಗೇಡಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.