ನವದೆಹಲಿ : ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಕಾಂಗ್ರೆಸ್ ಸಂಸದರು ಕರ್ನಾಟಕಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಪಕ್ಷದ ಸಂಸದರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನವಾಗಲಿ, ಕೊಡುಗೆಗಳಾಗಲಿ ಇಲ್ಲದೇ ಇರುವುದನ್ನು ಗಮನಕ್ಕೆ ತಂದು, ಈ ಹಿಂದೆ ರಾಜ್ಯಕ್ಕೆ ನಿಗದಿಯಾದ ನಬಾರ್ಡ್ ರೀ ಫೈನಾನ್ಸ್ ಅನ್ನು ಕಡಿಮೆಗೊಳಿಸಿದ ಬಗ್ಗೆ ಹಾಗೂ ಎಲ್ಐಸಿ ಪ್ರತಿನಿಧಿಗಳ ಬೇಡಿಕೆಯ ಬಗ್ಗೆ ಅವರ ಗಮನ ಸೆಳೆದಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಅಗ್ರಹಿಸಲಾಯಿತು. ಸಂಸದರಾದ ಜಿ. ಕುಮಾರ ನಾಯಕ, ರಾಜಶೇಖರ್ ಹಿಟ್ನಾಳ್, ಸಾಗರ್ ಖಂಡ್ರೆ, ಶ್ರೇಯಸ್ ಪಾಟೇಲ್, ಸುನೀಲ್ ಬೋಸ್, ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಉಪಸ್ಥಿತರಿದ್ದರು.
ಕರ್ನಾಟಕದ ಕಾಂಗ್ರೆಸ್ ಪಕ್ಷದ ಸಂಸದರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನವಾಗಲಿ, ಕೊಡುಗೆಗಳಾಗಲಿ ಇಲ್ಲದೇ ಇರುವುದನ್ನು ಗಮನಕ್ಕೆ ತಂದು, ಈ ಹಿಂದೆ ರಾಜ್ಯಕ್ಕೆ ನಿಗದಿಯಾದ ನಬಾರ್ಡ್ ರೀ ಫೈನಾನ್ಸ್ ಅನ್ನು ಕಡಿಮೆಗೊಳಿಸಿದ ಬಗ್ಗೆ… pic.twitter.com/fG2WoNvvyf
— Karnataka Congress (@INCKarnataka) February 4, 2025