alex Certify BIG NEWS : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ಇಂದಿನಿಂದ 45 ದಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ಇಂದಿನಿಂದ 45 ದಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ.!

ಬೆಂಗಳೂರು : ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆನ್ಸಿಂಗ್ಟನ್ ರಸ್ತೆಯಲ್ಲಿ ಬಿ.ಬಿ.ಎಂ.ಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವ ಸಂಬಂಧ ಇಂದಿನಿಂದ (ದಿನಾಂಕ: 04.02.2025) ರಿಂದ 45 ದಿನಗಳ ಕಾಲ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ ಎಂದು ಬೆಂಗಳೂರು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ

> ಹಳೆ ಮದ್ರಾಸ್ ರಸ್ತೆ ಆಂಜನೇಯ ಜಂಕ್ಷನ್ನಿಂದ – ಕೆನ್ಸಿಂಗ್ಟನ್ ಜಂಕ್ಷನ್ – ಗುರುದ್ವಾರ ಜಂಕ್ಷನ್ ವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
> ಕೆನ್ಸಿಂಗ್ಟನ್ ಜಂಕ್ಷನ್ನಿಂದ ಎಮ್.ಇ.ಜಿ ಜಂಕ್ಷನ್ವರೆಗೆ ನಿರ್ಬಂಧಿಸಲಾಗಿರುತ್ತದೆ. ಎರಡೂ ಬದಿಯ ಸಂಚಾರವನ್ನು
> ತಾಮರೈ ಕಣ್ಣನ್ ರಸ್ತೆಯಲ್ಲಿಯೂ ಸಹ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗ 

> ಇಂದಿರಾನಗರದ 80 ಅಡಿ ರಸ್ತೆ ಮತ್ತು 100 ಅಡಿ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ ಮೂಲಕ ನಗರದ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ಆಂಜನೇಯ ಜಂಕ್ಷನ್ ಬಳಿ ಎಡ ತಿರುವು ಪಡೆದು ಸ್ವಾಮಿ ವಿವೇಕಾನಂದ ರಸ್ತೆಯ ಮೂಲಕ ಆದರ್ಶ ಜಂಕ್ಷನ್ – ರಾಮಯ್ಯ ಜಂಕ್ಷನ್ ಕಾಮಧೇನು ಜಂಕ್ಷನ್ ಟ್ರಿನಿಟಿ ಜಂಕ್ಷನ್ – ವೆಬ್ ಜಂಕ್ಷನ್ ಮೂಲಕ ಮುಂದೆ ಸಂಚರಿಸಬಹುದಾಗಿದೆ.
> ವಾರ್ ಮೇಮೋರಿಯಲ್ ಕಡೆಯಿಂದ ಕೆ.ಆರ್.ಪುರ ಕಡೆಗೆ ಮೇಮೋರಿಯಲ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಪಡೆದು ಗಂಗಾಧರ ಚಟ್ಟಿ ರಸ್ತೆ ಮೂಲಕ ಸಾಗಿ ಗುರುದ್ವಾರ ರಸ್ತೆಯ ಮೂಲಕ ಮುಂದೆ ಸಂಚರಿಸಬಹುದಾಗಿದೆ. ಹೋಗುವ ವಾಹನ ಚಾಲಕರು/ಸವಾರರು ವಾರ್ ತಿರುವಳ್ಳುವರ್ ಜಂಕ್ಷನ್ ಬಳಿ ಎಡ ತಿರುವು ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಬಾಸ್ಕರನ್
> ಕೆನ್ಸಿಂಗ್ಟನ್ ಜಂಕ್ಷನ್ ಕಡೆಯಿಂದ ಇಂದಿರಾನಗರ ಸಿ.ಎಂ.ಹೆಚ್ ರಸ್ತೆ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ಹಳೆ ಮದ್ರಾಸ್ ರಸ್ತೆ ಮೂಲಕ ಸಾಗಿ ಡಬಲ್ ರಸ್ತೆ ಜಂಕ್ಷನ್ ಬಳಿ ಬಲ ತಿರುವು ಪಡೆದು ಮುಂದೆ ಸಂಚರಿಸಬಹುದಾಗಿದೆ.

 

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...