alex Certify ರೈತರ ಸಂಕಷ್ಟ ಅರಿಯಲು ಮಾರುವೇಷದಲ್ಲಿ ಬಂದ ಜಿಲ್ಲಾಧಿಕಾರಿ; ಅಕ್ರಮ ಪತ್ತೆ ಬೆನ್ನಲ್ಲೇ ಅಧಿಕಾರಿಗೆ ನೋಟೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಸಂಕಷ್ಟ ಅರಿಯಲು ಮಾರುವೇಷದಲ್ಲಿ ಬಂದ ಜಿಲ್ಲಾಧಿಕಾರಿ; ಅಕ್ರಮ ಪತ್ತೆ ಬೆನ್ನಲ್ಲೇ ಅಧಿಕಾರಿಗೆ ನೋಟೀಸ್

ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ರೈತರ ಸಂಕಷ್ಟ ಆಲಿಸಲು ಜಿಲ್ಲಾಧಿಕಾರಿಯೊಬ್ಬರು ಮಾರುವೇಷದಲ್ಲಿ ಮಂಡಿಗೆ ಭೇಟಿ ನೀಡಿದ ಘಟನೆ ಬೆಳಕಿಗೆ ಬಂದಿದೆ. ಭದ್ರಾಕ್ ಜಿಲ್ಲಾಧಿಕಾರಿ ದಿಲೀಪ್ ರೂಟ್ರಾಯ್, ರೈತರಂತೆ ಮಂಡಿಗೆ ತೆರಳಿ‌ ಧಾನ್ಯದ ಮೌಲ್ಯಮಾಪನದಲ್ಲಿ ಅನ್ಯಾಯಿಕ ಬೆಲೆ ಕಡಿತ ಆರೋಪಗಳ ಬಗ್ಗೆ ತನಿಖೆ ನಡೆಸಿದ್ದಾರೆ.

ಕಥಾಸಾಹಿ ಮಂಡಿಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಜಿಲ್ಲಾಧಿಕಾರಿ ತಮ್ಮ ವಾಹನವನ್ನು ದೂರದಲ್ಲಿ ನಿಲ್ಲಿಸಿ, ರೈತನಂತೆ ಸರಳ ಉಡುಗೆ ಧರಿಸಿ ಮುಖಗವಸು ಧರಿಸಿಕೊಂಡು ಮಂಡಿಗೆ ಭೇಟಿ ನೀಡಿದ್ದರು. ತಮ್ಮ ಗುರುತು ಬಹಿರಂಗಪಡಿಸದೆ, ಅವರು ರೈತರೊಂದಿಗೆ ಸಂವಾದ ನಡೆಸಿ, ಭತ್ತದ ಮಾರಾಟದ ಬಗ್ಗೆ ವಿಚಾರಿಸಿದ್ದಾರೆ. ನಂತರ, ಅವರು ಮತ್ತೊಬ್ಬ ರೈತನ ಟೋಕನ್ ಬಳಸಿ ಭತ್ತ ಮಾರಾಟ ಮಾಡಲು ಪ್ರಯತ್ನಿಸಿದ್ದು, ಆದರೆ, ಸಹಕಾರಿ ಅಧಿಕಾರಿಯು ಸುಮಾರು 8 ಕೆಜಿ ಭತ್ತವನ್ನು ವ್ಯರ್ಥ ಎಂದು ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ.

ರೈತರ ಆರೋಪಗಳು ನಿಜವೆಂದು ಕಂಡುಬಂದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ರೂಟ್ರಾಯ್ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಕಥಾಸಾಹಿ PACS (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ) ಕಾರ್ಯದರ್ಶಿಗೆ ನೀಡಲಾದ ಶೋಕಾಸ್ ನೋಟಿಸ್‌ನಲ್ಲಿ, “ನಿಮ್ಮ PACS ವಿರುದ್ಧ ಮಾಡಲಾದ ಆರೋಪಗಳು ನಿಜವೆಂದು ಕಂಡುಬಂದಿದೆ. ಆದ್ದರಿಂದ ನಿಮ್ಮ ವಿರುದ್ಧ ಸೂಕ್ತ ಕ್ರಮವನ್ನು ಏಕೆ ತೆಗೆದುಕೊಳ್ಳಬಾರದು ಎಂಬುದನ್ನು ನಿಮ್ಮಿಂದ ವಿವರಣೆ ಕೇಳಲಾಗುತ್ತದೆ” ಎಂದು ತಿಳಿಸಲಾಗಿದೆ.

ನೋಟಿಸ್ ಸ್ವೀಕರಿಸಿದ ಎರಡು ದಿನಗಳ ಒಳಗೆ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಬೇಕೆಂದು ನೋಟಿಸ್‌ನಲ್ಲಿ ತಿಳಿಸಲಾಗಿದ್ದು, ತಪ್ಪಿದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. “ರೈತರು PACS ಮತ್ತು ಮಿಲರ್‌ಗಳ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆ” ಎಂಬ ಬಗ್ಗೆ ವಿವಿಧ ವರದಿಗಳು ಮತ್ತು ಆರೋಪಗಳನ್ನು ಸ್ವೀಕರಿಸಲಾಗಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗೆ, ಭದ್ರಾಕ್‌ನ ಸಹಕಾರಿ ಸಂಘಗಳ ಸಹಾಯಕ ನೋಂದಣಾಧಿಕಾರಿ (ARCS) ಸಹ ಜಿಲ್ಲೆಯ ಹಲವಾರು PACS ಕಾರ್ಯದರ್ಶಿಗಳನ್ನು ಭೇಟಿ ಮಾಡಿ ರೈತರಿಗೆ ನಷ್ಟವಾಗದಂತೆ ನೋಡಿಕೊಳ್ಳಲು ಭರವಸೆ ನೀಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...