alex Certify ಡ್ಯಾಶ್‌ಕ್ಯಾಮ್‌ನಿಂದ ಬಯಲಾಯ್ತು ನಕಲಿ ಅಪಘಾತ: ಬೆಂಗಳೂರಿನಲ್ಲಿ “ಕ್ರ್ಯಾಶ್ ಫಾರ್ ಕ್ಯಾಶ್” ಜಾಲ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ಯಾಶ್‌ಕ್ಯಾಮ್‌ನಿಂದ ಬಯಲಾಯ್ತು ನಕಲಿ ಅಪಘಾತ: ಬೆಂಗಳೂರಿನಲ್ಲಿ “ಕ್ರ್ಯಾಶ್ ಫಾರ್ ಕ್ಯಾಶ್” ಜಾಲ ಬಯಲು

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ಆಘಾತಕಾರಿ ದೃಶ್ಯಾವಳಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬ ನಕಲಿ ಅಪಘಾತ ಸೃಷ್ಟಿಸಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ಚಲಿಸುತ್ತಿರುವ ವಾಹನದ ಮುಂದೆ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಬಂದು ಬಿದ್ದು ಗಾಯಗೊಂಡಂತೆ ನಟಿಸುವ ದೃಶ್ಯ ವಿಡಿಯೊದಲ್ಲಿದೆ. ಚಾಲಕನನ್ನು ವಂಚಿಸಿ ಪರಿಹಾರ ಪಡೆಯುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ. ಇಬ್ಬರು ಬೈಕ್ ಸವಾರರು ನಂತರದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ನಕಲಿ ಸಾಕ್ಷಿಗಳಂತೆ ವರ್ತಿಸಲು ಬಂದಿದ್ದಾರೆಂದು ಹೇಳಲಾಗಿದೆ.

ವಾಹನದಲ್ಲಿ ಡ್ಯಾಶ್‌ಕ್ಯಾಮ್ ಇದ್ದ ಕಾರಣ ಚಾಲಕ ಸುಳ್ಳು ಆರೋಪಗಳಿಂದ ಪಾರಾಗಿದ್ದಾರೆ. safecars_india ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಈ ಘಟನೆ ಆನ್‌ಲೈನ್‌ನಲ್ಲಿ ತೀವ್ರ ಟೀಕೆ ಮತ್ತು ಚರ್ಚೆಗೆ ಗ್ರಾಸವಾಗಿದೆ. ನೆಟಿಜನ್‌ಗಳು ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇಂತಹ ಕೃತ್ಯಗಳು ಹಣ ಸುಲಿಗೆ ಮತ್ತು ಚಾಲಕರನ್ನು ಕಿರುಕುಳ ನೀಡುವ ಮಾರ್ಗವಾಗಿ ಹೇಗೆ ಮಾರ್ಪಟ್ಟಿವೆ ಎಂಬುದನ್ನು ಹಲವು ಬಳಕೆದಾರರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ಡ್ಯಾಶ್‌ಕ್ಯಾಮ್‌ನ ಬಳಕೆಯನ್ನು ಇತರರು ಹೈಲೈಟ್ ಮಾಡಿದ್ದಾರೆ.

“ಕ್ರ್ಯಾಶ್ ಫಾರ್ ಕ್ಯಾಶ್”: ಇಂತಹ ನಕಲಿ ಅಪಘಾತ ಪ್ರಕರಣಗಳನ್ನು “ಕ್ರ್ಯಾಶ್ ಫಾರ್ ಕ್ಯಾಶ್” ಎಂದು ಕರೆಯಲಾಗುತ್ತದೆ. ವಂಚಕರು ನಕಲಿ ಅಪಘಾತಗಳನ್ನು ಸೃಷ್ಟಿಸಿ ಸುಳ್ಳು ವಿಮಾ ಕ್ಲೈಮ್ ಸಲ್ಲಿಸಲು ಅಥವಾ ಚಾಲಕರಿಂದ ಹಣ ಸುಲಿಗೆ ಮಾಡಲು ಪ್ರಯತ್ನಿಸುತ್ತಾರೆ.

 

View this post on Instagram

 

A post shared by Prateek Singh (@safecars_india)

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...