ನವದೆಹಲಿ: ದೇಶೀಯ ಆರ್ಥಿಕ ಚಟುವಟಿಕೆಯಲ್ಲಿ ಹೆಚ್ಚಳದಿಂದಾಗಿ ಜನವರಿಯಲ್ಲಿ ಒಟ್ಟು ಜಿಎಸ್‌ಟಿ ಆದಾಯವು ಶೇ.12.3 ರಷ್ಟು ಏರಿಕೆಯಾಗಿ 1.96 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಇದರಲ್ಲಿ ದೇಶೀಯವಾಗಿ ಸರಕು ಮತ್ತು ಸೇವೆಗಳ ಮಾರಾಟದಿಂದ ಬರುವ ಆದಾಯದಲ್ಲಿ ಶೇ.10.4 ರಷ್ಟು ಬೆಳವಣಿಗೆಯಾಗಿದ್ದು, 1.47 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಮತ್ತು ಆಮದು ಮಾಡಿಕೊಂಡ ಸರಕುಗಳಿಂದ ಬರುವ ತೆರಿಗೆ ಆದಾಯದಲ್ಲಿ ಶೇ.19.8 ರಷ್ಟು ಏರಿಕೆಯಾಗಿದ್ದು, 48,382 ಕೋಟಿ ರೂ.ಗಳಿಗೆ ತಲುಪಿದೆ.
ಜನವರಿಯಲ್ಲಿ ಒಟ್ಟು ಜಿಎಸ್‌ಟಿ ಆದಾಯವು ಶೇ.1,95,506 ಕೋಟಿ ರೂ.ಗಳಿಗೆ ತಲುಪಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ.12.3 ರಷ್ಟು ಬೆಳವಣಿಗೆಯಾಗಿದೆ.
ಈ ತಿಂಗಳಲ್ಲಿ 23,853 ಕೋಟಿ ರೂ.ಮರುಪಾವತಿಗಳನ್ನು ನೀಡಲಾಗಿದೆ, ಇದು ಶೇ.24 ರಷ್ಟು ಏರಿಕೆಯಾಗಿದೆ. ಮರುಪಾವತಿಗಳನ್ನು ಸರಿಹೊಂದಿಸಿದ ನಂತರ ಒಟ್ಟು ನಿವ್ವಳ ಜಿಎಸ್‌ಟಿ ಆದಾಯವು ಶೇ.10.9 ರಷ್ಟು ಹೆಚ್ಚಾಗಿದೆ.
ಜಿಎಸ್‌ಟಿ ಸಂಗ್ರಹದಲ್ಲಿನ ಈ ಸ್ಥಿರ ಹೆಚ್ಚಳವು ಆರ್ಥಿಕ ಬೆಳವಣಿಗೆಯಲ್ಲಿನ ಏರಿಕೆ ಮತ್ತು ವ್ಯವಹಾರಗಳಿಂದ ನಿರಂತರ ತೆರಿಗೆ ಅನುಸರಣೆಯನ್ನು ಸೂಚಿಸುತ್ತದೆ ಎಂದು ಕೆಪಿಎಂಜಿಯ ಪರೋಕ್ಷ ತೆರಿಗೆ ಮುಖ್ಯಸ್ಥ ಮತ್ತು ಪಾಲುದಾರ ಅಭಿಷೇಕ್ ಜೈನ್ ಹೇಳಿದರು.
ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ತೆಲಂಗಾಣ ಮತ್ತು ಯುಪಿಯಂತಹ ದೊಡ್ಡ ರಾಜ್ಯಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಶೇ. 10-20 ರಷ್ಟು ಗಮನಾರ್ಹ ಹೆಚ್ಚಳ ಇದೆ. ಕರ್ನಾಟಕ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಂತಹ ದೊಡ್ಡ ರಾಜ್ಯಗಳು ಕೇವಲ ಶೇ. 5 ರಿಂದ 9 ರಷ್ಟು ಏರಿಕೆಯನ್ನು ತೋರಿಸಿವೆ ಎನ್ನಲಾಗಿದೆ.