ಬೆಂಗಳೂರು: ಉಡುಪಿ ಮೂಲದ ಮತ್ತೊಬ್ಬ ನಕ್ಸಲ್ ಮಹಿಳೆ ಶರಣಾಗತಿಯಾಗುವ ಸಾಧ್ಯತೆ ಇದೆ. ಉಡುಪಿ ಅಥವಾ ಚಿಕ್ಕಮಗಳೂರಿನಲ್ಲಿ ಅವರು ಶರಣಾಗಲಿದ್ದಾರೆ ಎನ್ನಲಾಗಿದೆ.
ಆಂಧ್ರಪ್ರದೇಶದಲ್ಲಿ ನಕ್ಸಲ್ ಮಹಿಳೆ ಲಕ್ಷ್ಮಿ ತೊಂಬಟ್ಟು ಸಕ್ರಿಯವಾಗಿದ್ದರು. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಅಮಾಸೆಬೈಲು ಸಮೀಪದ ತೊಂಬಟ್ಟು ಗ್ರಾಮದ ನಿವಾಸಿ ಲಕ್ಷ್ಮಿ 2006ರ ಮಾರ್ಚ್ 6ರಿಂದ ಕಣ್ಮರೆಯಾಗಿದ್ದರು. ಅವರು ಮಾಜಿ ನಕ್ಸಲ್ ಸಂಜೀವ ಅಲಿಯಾಸ್ ಸಲೀಂ ಜೊತೆಗೆ ವಿವಾಹವಾಗಿದ್ದಾರೆ. ನಕ್ಸಲ್ ಚಟುವಟಿಕೆ ಬಿಟ್ಟು ಆಂಧ್ರಪ್ರದೇಶದಲ್ಲಿ ಸಂಜೀವ ಜೊತೆಗೆ ಲಕ್ಷ್ಮಿ ಜೀವನ ನಡೆಸುತ್ತಿದ್ದಾರೆ.
ಸದ್ಯ ಮುಖ್ಯ ವಾಹಿನಿಗೆ ಅವರ ಪತಿ ಸಂಜೀವ ಬಂದಿದ್ದಾರೆ. ನಕ್ಸಲ್ ಮಹಿಳೆ ಲಕ್ಷ್ಮಿ ಅವರು ಸಹ ಶರಣಾಗುವ ಸಾಧ್ಯತೆ ಇದೆ. ಸದ್ಯ ಕರ್ನಾಟಕದಲ್ಲಿ ಲಕ್ಷ್ಮಿ ವಿರುದ್ಧ ಅಮಾಸೆಬೈಲು ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿವೆ.
ಇತ್ತೀಚೆಗಷ್ಟೇ 6 ಮಂದಿ ನಕ್ಸಲರು ಶರಣಾಗಿದ್ದರು. ಇಂದು ನಕ್ಸಲ್ ರವೀಂದ್ರ ಅವರೂ ಶರಣಾಗಿದ್ದಾರೆ.