ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ವೃದ್ಧ ದಂಪತಿ ಸಜೀವದಹನವಾಗಿರುವ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ.
ರಾಘವನ್ (96) ಹಾಗೂ ಪತ್ನಿ ಭಾರತಿ (86) ಮೃತ ದುರ್ದೈವಿಗಳು. ಪ್ರಕರಣ ಸಂಬಂಧ ದಂಪತಿಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಮಗನೇ ವೃದ್ಧ ತಂದೆ-ತಾಯಿ ವಾಸವಾಗಿದ್ದ ಮನೆಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ಪುತ್ರ ವಿಜಯ್ ಆಸ್ತಿ ವಿಚಾರವಾಗಿ ಪೋಷಕರ ಜೊತೆ ಜಗಳ ವಾಡುತ್ತಿದ್ದ ಎನ್ನಲಾಗಿದೆ. ಇಂದು ಬೆಳಗಿನ ಜಾವ 3:30ರ ಸುಮಾರಿಗೆ ಮನೆ ಬೆಂಕಿಯಲ್ಲಿ ಧಗಧಗನೆ ಹೊತ್ತಿ ಉರಿದಿದೆ. ಇದನ್ನು ಚಾಲಕರೊಬ್ಬರು ಗಮನಿಸಿದ್ದು, ತಕ್ಷಣ ಸ್ಥಳೀಯರನ್ನು ಕೂಗಿ ಕರೆದು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಮನೆಯೊಳಗಿದ್ದ ವೃದ್ಧ ದಂಪತಿ ಸುಟ್ಟು ಕರಕಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗಮಿಸಿ ಪರಿಶೀಲಿಸಿರುವ ಮುನ್ನಾರ್ ಪೊಲೀಸರು ಮಗ ವಿಜಯ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.