ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯ ಕುಜಾಂಗ್ ತೆಹಸಿಲ್ನ ಪರದೀಪ್ಗಢ್ ಗ್ರಾಮದಲ್ಲಿ ಅತಿ ವಿರಳ ಘಟನೆಯೊಂದು ನಡೆದಿದೆ. ಮಾರಣಾಂತಿಕ ರಸೆಲ್ಸ್ ವೈಪರ್ ಹಾವು ಕಚ್ಚಿದರೂ ವ್ಯಕ್ತಿಯೊಬ್ಬ ಬದುಕಿರುವುದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. ಕಚ್ಚಿದ ನಂತರ ಹಾವು ಸಾವನ್ನಪ್ಪಿದೆ.
ವರದಿಯ ಪ್ರಕಾರ, ವ್ಯಕ್ತಿಯೊಬ್ಬ ರಸೆಲ್ಸ್ ವೈಪರ್ ಹಾವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ತಂದಿದ್ದ. ಪರದೀಪ್ಗಢ್ ಗ್ರಾಮಕ್ಕೆ ಬಂದ ನಂತರ ರಸ್ತೆಯ ಪಕ್ಕದಲ್ಲಿ ಕುಳಿತು ವಿಷಪೂರಿತ ಹಾವಿನೊಂದಿಗೆ ಆಟವಾಡಲು ಪ್ರಾರಂಭಿಸಿದ್ದಾನೆ.
ಹಾವು ಹಿಡಿಯಲು ಯತ್ನಿಸುವಾಗ ಹಾವು ಆತನ ಕೈಗೆ ಕಚ್ಚಿದೆ. ಆದರೆ ಎಲ್ಲರನ್ನೂ ಬೆಚ್ಚಿಬೀಳಿಸಿದ್ದು ಏನೆಂದರೆ, ಹಾವು ಕಚ್ಚಿದ ಕೆಲವೇ ಕ್ಷಣಗಳಲ್ಲಿ ನಿಶ್ಚೇಷ್ಟಿತವಾಗಿ ನಂತರ ಸತ್ತೇ ಹೋಯಿತು. ಆದರೆ ವ್ಯಕ್ತಿ ಮಾತ್ರ ಸಂಪೂರ್ಣವಾಗಿ ಆರೋಗ್ಯವಾಗಿದ್ದ. ನಂತರ, ವ್ಯಕ್ತಿಯು ಹಾವಿನ ಅಂತ್ಯಕ್ರಿಯೆ ನೆರವೇರಿಸಿ ಬೆಂಕಿಯಲ್ಲಿ ಸುಟ್ಟಿದ್ದಾನೆ.
ಇದನ್ನು ನೋಡಿದ ಕೆಲವರು ಈ ಅಪರೂಪದ ಕ್ಷಣವನ್ನು ತಮ್ಮ ಫೋನ್ಗಳಲ್ಲಿ ಸೆರೆಹಿಡಿದಿದ್ದು, ಇತರರೊಂದಿಗೆ ಹಂಚಿಕೊಂಡ ನಂತರ ಹಲವಾರು ವಿಡಿಯೋಗಳು ವೈರಲ್ ಆಗಿವೆ.
ಈ ಘಟನೆ ಸ್ಥಳೀಯರಲ್ಲಿ ಚರ್ಚೆಯ ವಿಷಯವಾಗಿದೆ. ಆದಾಗ್ಯೂ, ಕೆಲವರು ಆ ವ್ಯಕ್ತಿ ಮಾನಸಿಕ ಅಸ್ವಸ್ಥ ವ್ಯಕ್ತಿ ಎಂದು ಹೇಳಿದ್ದಾರೆ.