ಬೆಂಗಳೂರು : ಗಾಳಿಯಲ್ಲಿ ಗುಂಡು ಹಾರಿಸಿ ರೌಡಿಶೀಟರ್ ಸೈಕೋ ಕಿರಣ್ ನನ್ನ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಜೆಬಿ ನಗರದ ನ್ಯೂ ತಿಪ್ಪಸಂದ್ರದಲ್ಲಿ ಈ ಘಟನೆ ನಡೆದಿದೆ. ಬಂಧಿಸಲು ಸೈಕೋ ಕಿರಣ್ ಮನೆಗೆ ತೆರಳಿದ್ದಾಗ ಸೈಕೋ ಕಿರಣ್ ಪೊಲೀಸರ ಮೇಲೆ ಡ್ಯಾಗರ್ ಮೂಲಕ ಹಲ್ಲೆಗೆ ಯತ್ನಿಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆ ನಡೆಸಲು ಯತ್ನಿಸಿದ ಕಿರಣ್ ನನ್ನು ಹೆಚ್ ಎಲ್ ಪೊಲೀಸರು ಬಂಧಿಸಿದ್ದಾರೆ. ಹೆಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸೈಕೋ ಕಿರಣ್ ವಿರುದ್ಧ ಪ್ರಕರಣ ದಾಖಲಾಗಿದೆ.