alex Certify BREAKING : ‘GBS’ ವೈರಸ್’ ಗೆ ಮಹಾರಾಷ್ಟ್ರದಲ್ಲಿ ಮತ್ತೆ ಎರಡು ಬಲಿ : ದೇಶದಲ್ಲಿ ಸಾವಿನ ಸಂಖ್ಯೆ 7 ಕ್ಕೇರಿಕೆ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘GBS’ ವೈರಸ್’ ಗೆ ಮಹಾರಾಷ್ಟ್ರದಲ್ಲಿ ಮತ್ತೆ ಎರಡು ಬಲಿ : ದೇಶದಲ್ಲಿ ಸಾವಿನ ಸಂಖ್ಯೆ 7 ಕ್ಕೇರಿಕೆ.!

ಗಿಲ್ಲೆನ್-ಬ್ಯಾರಿ ಸಿಂಡ್ರೋಮ್  (GBS) ಎಂಬ ಹೊಸ ಡೆಡ್ಲಿ ವೈರಸ್ ದೇಶದ ಹಲವು ಕಡೆ ಆತಂಕ ಸೃಷ್ಟಿಸಿದೆ. ಈ ಸೋಂಕಿಗೆ ಮಹಾರಾಷ್ಟ್ರದಲ್ಲಿ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ, ಈ ಮೂಲಕ ದೇಶದಲ್ಲಿ ಈ ಸೋಂಕಿಗೆ ಬಲಿಯಾದವರ ಸಂಖ್ಯೆ 7 ಕ್ಕೇರಿಕೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಕೂಡ ಕಳೆದ ಕೆಲವು ದಿನಗಳಲ್ಲಿ ಶಂಕಿತ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ (ಜಿಬಿಎಸ್) ನಿಂದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಎಂದರೇನು? ಏನಿದರ ಲಕ್ಷಣಗಳು.?

ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಅಪರೂಪದ ನರವೈಜ್ಞಾನಿಕ ಅಸ್ವಸ್ಥತೆಯಾಗಿದ್ದು, ಇದರಲ್ಲಿ ಬಾಹ್ಯ ನರಮಂಡಲವು ದೇಹದ ಪ್ರತಿರಕ್ಷಣಾ ವ್ಯವಸ್ಥೆಯಿಂದ ದಾಳಿಗೊಳಗಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕಿಗೆ ಒಳಗಾದ ಜನರಲ್ಲಿ ಸಿಂಡ್ರೋಮ್ ಕಂಡುಬರುತ್ತದೆ.

ಗಿಲ್ಲೆನ್-ಬ್ಯಾರಿ ಸಿಂಡ್ರೋಮಿನ ಮುಖ್ಯ ಲಕ್ಷಣಗಳೆಂದರೆ ಕಾಲು, ತೋಳುಗಳ ಮತ್ತು ಮುಖದ ನರಗಳ ದೌರ್ಬಲ್ಯ, ಮೈ ಜುಮ್ಮೆನಿಸುವಿಕೆ, ಸ್ನಾಯುಗಳಲ್ಲಿ ಶಕ್ತಿಯಿಲ್ಲದಿರುವುದು ಮತ್ತು ಎದೆಯ ಸ್ನಾಯುಗಳು ದುರ್ಬಲವಾಗಿ ಉಸಿರಾಟ ಕಷ್ಟವಾಗುವುದು (ಶೇಕಡಾ 20ರಿಂದ 30ರಷ್ಟು ಜನರಲ್ಲಿ). ತೀವ್ರ ಸಮಸ್ಯೆಯಾಗಿದ್ದಲ್ಲಿ ಮಾತನಾಡಲು ಮತ್ತು ಆಹಾರ ನುಂಗಲು ಕಷ್ಟವಾಗುವುದು. ಇಂತಹ ಪ್ರಕರಣಗಳನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಒಟ್ಟಾರೆ ಹೇಳುವುದಾದರೆ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಉಸಿರಾಟ, ರಕ್ತದ ಸೋಂಕು, ಶ್ವಾಸಕೋಶದ ಹೆಪ್ಪುಗಟ್ಟುವಿಕೆ ಅಥವಾ ಹೃದಯ ಸ್ತಂಭನವನ್ನು ನಿಯಂತ್ರಿಸುವ ಸ್ನಾಯುಗಳ ಪಾರ್ಶ್ವವಾಯುವನ್ನು ಒಳಗೊಂಡಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...