ಬೆಂಗಳೂರು: ರದ್ದಾದ ಪಿಜಿ ವೈದ್ಯಕೀಯ ಸೀಟುಗಳನ್ನು ಫೆಬ್ರವರಿ 10 ರಿಂದ ಹಂಚಿಕೆ ಮಾಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮಾಹಿತಿ ನೀಡಿದೆ.
2024 ನೇ ಸಾಲಿನ ಪಿಜಿ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆ ನಂತರ ಶುಕ್ರವಾರ ಅಭ್ಯರ್ಥಿಗಳು ರದ್ದುಪಡಿಸಿಕೊಂಡ ಒಟ್ಟು 31 ಸೀಟುಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿರುವುದಾಗಿ ತಿಳಿಸಿದೆ.
ರದ್ದುಪಡಿಸಲಾದ ಸೀಟುಗಳನ್ನು ಮತ್ತು ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಯ ಬಳಿಕ ಉಳಿದಿರುವ ಸೀಟುಗಳನ್ನು ಸ್ಟೇವೇಕೆನ್ಸಿ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ. ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯನ್ನು ಫೆಬ್ರವರಿ 10ರಿಂದ ಪ್ರಾರಂಭಿಸುವ ಕುರಿತು ಸದ್ಯದಲ್ಲಿಯೇ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.