ಬೆಂಗಳೂರು : ಫೆಬ್ರವರಿ 11 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಪೂರ್ವಭಾವಿಯಾಗಿ ಮಂಗಳವಾರ (ಜನವರಿ 28) ಮುಂಬೈನಲ್ಲಿ ರೋಡ್ ಶೋ ನಡೆಯಿತು.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ನೇತೃತ್ವದ ನಿಯೋಗವು ಹಿಂಡಾಲ್ಕೊ ಇಂಡಸ್ಟ್ರೀಸ್, ವ್ಯಾನಿಟಿ ಕೇಸ್ ಗ್ರೂಪ್, ಆರ್ಪಿಜಿ ಗ್ರೂಪ್, ಜ್ಯೋತಿ ಲ್ಯಾಬ್ಸ್ ಹಾಗೂ ಪಿಡಿಲೈಟ್ ಇಂಡಸ್ಟ್ರೀಸ್ನ ಪ್ರಮುಖರ ಜೊತೆ ಮಾತುಕತೆ ನಡೆಸಿತು.