ಬೆಂಗಳೂರು : ಹೊಸದಾಗಿ ವಾಹನ ಕೊಳ್ಳುವವರಿಗೆ ಬಿಗ್ ಶಾಕ್ ಎದುರಾಗಿದ್ದು, ರಾಜ್ಯ ಸರ್ಕಾರ ಸೆಸ್ ಹೆಚ್ಚಳ ಮಾಡಿದೆ.
ಹೊಸ ಕಾರು ಖರೀದಿ ಮಾಡುವವರು 1000 ರೂಪಾಯಿ , ಹೊಸದಾಗಿ ಬೈಕ್ ಖರೀದಿ ಮಾರುವವರು 500 ರೂ ಹೆಚ್ಚುವರಿಯಾಗಿ ಸೆಸ್ ರೂಪದಲ್ಲಿ ಸಾರಿಗೆ ಇಲಾಖೆಗೆ ಪಾವತಿ ಮಾಡಬೇಕಾಗಿದೆ.
ಯೆಲ್ಲೋ ಬೋರ್ಡ್ ವಾಹನಗಳನ್ನು ಖರೀದಿ ಮಾಡುವವರ ಬಳಿ ಸೆಸ್ ಸಂಗ್ರಹ ಮಾಡುವಂತಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ರಸ್ತೆ ತೆರಿಗೆಗಳನ್ನು ಈಗಾಗಲೇ ಏರಿಸಿರುವ ಕಾಂಗ್ರೆಸ್ ಸರ್ಕಾರ ಈಗ ಹೊಸ ಕಾರು ಮತ್ತು ಬೈಕ್ಗಳಿಗೆ ಕ್ರಮವಾಗಿ ₹500 ಮತ್ತು ₹1000 ಸೆಸ್ ಏರಿಸಿದ್ದು, ಮಧ್ಯಮ ವರ್ಗದ ಜನತೆಗೆ ಮತ್ತೆ ಹೊರೆಯಾಗಲಿದೆ.