![](https://kannadadunia.com/wp-content/uploads/2023/01/dead-body-ani-1621738420.jpg)
ಮೈಸೂರು: ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಶೇಷಗಳಡಿ ಸಿಲುಕಿದ್ದ ಓರ್ವ ಯುವಕ ಸಾವನ್ನಪ್ಪಿದ್ದಾನೆ.
ಕಾರ್ಯಾಚರಣೆ ಮುಂದುವರೆದಂತೆ ಮುಂಜಾನೆ ಅವಶೇಷಗಳಡಿ ಸದ್ದಾಂ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣೆಗೆ ಹರಸಾಹಸ ನಡೆಸಿದ್ದರು. ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ವರ್ಷದ ಹಿಂದೆ ಶಿಥಿಲಗೊಂಡು ಕುಸಿದಿದ್ದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡ ದುರಸ್ತಿ ಕಾಮಗಾರಿ ವೇಳೆ ಮೇಲ್ಚಾವಣಿ ಪೂರ್ಣ ಕುಸಿದು ದುರಂತ ಸಂಭವಿಸಿದೆ. ಕೆಲವು ದಿನಗಳಿಂದ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಿ ಪಾರಂಪರಿಕ ಮಾದರಿಯಲ್ಲಿ ಮರು ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 14 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಹೊರಡಲು ಸಿದ್ದವಾಗುತ್ತಿದ್ದ ವೇಳೆ ಏಕಾಏಕಿ ಛಾವಣಿ ಕುಸಿದಿದೆ. ಅವಶೇಷಗಳಡಿ ಸಿಲುಕಿದ್ದ ಹಲವರನ್ನು ರಕ್ಷಿಸಲಾಗಿದೆ. ಆದರೆ, ಸದ್ದಾಂ ಮೃತಪಟ್ಟಿದ್ದಾರೆ.