ಮುಂಬೈ: ಗುಲ್ಲೈನ್ ಬ್ಯಾರೆ ಸಿಂಡ್ರೋಮ್ (GBS) ಎಂಬ ಹೊಸ ಡೆಡ್ಲಿ ವೈರಸ್ ಮಹಾರಾಷ್ಟ್ರದಲ್ಲಿ ಆತಂಕ ಸೃಷ್ಟಿಸಿದೆ. ಈ ಸೋಂಕಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ 41 ವರ್ಷದ ವ್ಯಕ್ತಿ ಜಿಬಿಎಸ್ ವೈರಸ್ ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದಲ್ಲಿ ಈ ವೈರಸ್ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ.
ಇದೊಂದು ಅಪರೂಪದ ಹಾಗೂ ನರವೈಜ್ಞಾನಿತ ಕಾಯಿಲೆಯಾಗಿದೆ. ನಡೆಯಲು ಸಾಧ್ಯವಾಗದ ಸ್ಥಿತಿ, ನುಂಗಲು ಕಷ್ಟ, ದೃಷ್ಟಿ ಸಮಸ್ಯೆ, ದೃಷ್ಟಿ ಎರಡೆರಡಾಗಿ ಕಾಣುವುದು, ಲೋ ಬಿಪಿ, ಇಲ್ಲವೇ ಹೈ ಬಿಪಿ, ಉಸಿರಾಟದ ಸಮಸ್ಯೆ ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.