ವೇಗವಾಗಿ ಚಲಿಸುತ್ತಿದ್ದ ಎರಡು ಬಸ್ಗಳ ನಡುವೆ ಸಿಲುಕಿಕೊಂಡ ವ್ಯಕ್ತಿಯೊಬ್ಬ ಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾಗಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನಲ್ಲಿ ನಡೆದಿರುವ ಘಟನೆಯ ಭಯಾನಕ ಕ್ಷಣ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಘಟನೆಯ ಕುರಿತು ಆಘಾತ ಹಾಗೂ ಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾಗಿರುವ ವ್ಯಕ್ತಿಯ ಅದೃಷ್ಟವನ್ನು ಕೊಂಡಾಡಿದ್ದಾರೆ.
ಜನವರಿ ಆರಂಭದಲ್ಲಿ ಈ ಘಟನೆ ನಡೆದಿದ್ದು, ಭರತ್ ಎಂಬ ಈ ವ್ಯಕ್ತಿ ತಮರಾಂಕೋಟ್ಟಿಯಿಂದ ಪಟ್ಟುಕೋಟ್ಟೈಗೆ ಹೋಗುವ ಸಲುವಾಗಿ ಖಾಸಗಿ ಬಸ್ ಹತ್ತಲು ಬರುತ್ತಿದ್ದರು. ಈ ಸಂದರ್ಭದಲ್ಲಿ ಖಾಸಗಿ ಬಸ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದ ಸರ್ಕಾರಿ ಬಸ್ ಅಪಾಯಕರವಾಗಿ ಎಡಕ್ಕೆ ತಿರುಗಿದ್ದು, ಭರತ್ ಎರಡು ವಾಹನಗಳ ನಡುವೆ ಸಿಲುಕಿಕೊಂಡಿದ್ದಾರೆ.
ವೈರಲ್ ವೀಡಿಯೊದಲ್ಲಿ, ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ಯತ್ನಿಸುತ್ತಿದ್ದ ಭರತ್ ಅಂತಿಮವಾಗಿ ನೆಲಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ಕೆಲವು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
A man got stuck between two buses while crossing the road in Pattukottai, Tamil Nadu. Fortunately, he escaped without any injuries and walked away limping.
This is the miracle, this is the misfortune, this is his. pic.twitter.com/WSgjYMYc1Q— Venkatesh Garre (@Venkatesh_G1324) January 4, 2025