ಹರಿದ್ವಾರದ ಕುಂಜಾ ಬಹದ್ದೂರ್‌ಪುರದಲ್ಲಿ ನಡೆದ ಒಂದು ವಿವಾಹ ಮಹೋತ್ಸವ ಅತಿಥಿಗಳನ್ನು ಆಶ್ಚರ್ಯಗೊಳಿಸಿದೆ. ಸಹರಾನ್‌ಪುರದ ರಾಂಪುರ್ ಮನಿಹರನ್‌ನಿಂದ ಬಂದ ವರ ತನ್ನ ವಿವಾಹ ಸಮಾರಂಭದಲ್ಲಿ ಸ್ವತಃ ತಾನೇ ವೇದ ಮಂತ್ರಗಳನ್ನು ಪಠಿಸಿದ್ದಾನೆ. ಈ ವಿಶಿಷ್ಟ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಾಂಪುರ್ ಮನಿಹರನ್‌ನಿಂದ ಬಂದ ವರ ವಿವೇಕ್ ಕುಮಾರನ ವಿವಾಹ ಪೂರ್ವ ಮೆರವಣಿಗೆ ಹರಿದ್ವಾರಕ್ಕೆ ತಲುಪಿದ್ದು, ವರ ವಿವಾಹ ಕಾರ್ಯಕ್ರಮವನ್ನು ಸ್ವತಃ ನೆರವೇರಿಸಲು ಮುಂದಾದಾಗ ಎಲ್ಲರಿಗೂ ಅಚ್ಚರಿಯಾಗಿದೆ. ತಾನೇ ಸ್ವತಃ ಪವಿತ್ರ ವೇದ ಮಂತ್ರಗಳನ್ನು ಪಠಿಸಲು ನಿರ್ಧರಿಸಿದ್ದು, ಈ ಕ್ಷಣವನ್ನು ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ, ವಿವೇಕ್ ಪೂಜಾ ಕಾರ್ಯಗಳನ್ನು ನಿರ್ವಹಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.
ಲೈವ್ ಹಿಂದೂಸ್ತಾನ್ ಪ್ರಕಾರ, ವರ ವೇದ ಮಂತ್ರಗಳನ್ನು ಕಲಿತಿದ್ದು, ತಮ್ಮ ಜ್ಞಾನದ ಮೇಲಿನ ವಿಶ್ವಾಸದೊಂದಿಗೆ ವಿವಾಹದಲ್ಲಿ ಪವಿತ್ರ ಕಾರ್ಯಗಳನ್ನು ನಿರ್ವಹಿಸಲು ನಿರ್ಧರಿಸಿದ್ದರು ಎನ್ನಲಾಗಿದೆ. ಇದೀಗ ಈ ವಿವಾಹದ ವಿಚಾರ ಅಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಗುರುಕುಲ ಕಾಂಗ್ರಿ ವಿಶ್ವವಿದ್ಯಾನಿಲಯದಲ್ಲಿ ಬಿ.ಫಾರ್ಮಾ ವಿದ್ಯಾರ್ಥಿಯಾಗಿದ್ದ ವೇಳೆ ಧಾರ್ಮಿಕ ವಿಧಿಗಳ ಬಗ್ಗೆ ತಮ್ಮ ಆಸಕ್ತಿಯಿಂದಾಗಿ ಮಂತ್ರಗಳನ್ನು ಕಲಿತಿರುವ ವಿಚಾರವನ್ನು ವಿವೇಕ್ ಕುಮಾರ್ ಹಂಚಿಕೊಂಡಿದ್ದಾರೆ. ವೇದಿಕ ಪರಂಪರೆಗಳಿಗೆ ಬದ್ಧವಾಗಿರುವ ಸಂಸ್ಥೆಯಾದ ಆರ್ಯ ಸಮಾಜದೊಂದಿಗೆ ತಮ್ಮ ಕುಟುಂಬ ಹೊಂದಿರುವ ಸಂಬಂಧವು ತಮ್ಮ ಬೆಳವಣಿಗೆಗೆ ಸಹಾಯಕವಾಗಿತ್ತು ಎಂದಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ವಿವೇಕ್ ಆಗಾಗ್ಗೆ ಆರ್ಯ ಸಮಾಜಕ್ಕೆ ಭೇಟಿ ನೀಡುತ್ತಿದ್ದರು, ಅಲ್ಲಿ ಅವರು ವೇದ ಮಂತ್ರಗಳನ್ನು ಕಲಿಯಲು ಪ್ರಾರಂಭಿಸಿದ್ದರು ಎನ್ನಲಾಗಿದೆ.
12 ನೇ ತರಗತಿ ಪೂರ್ಣಗೊಳಿಸಿದ ನಂತರ, ವಿವೇಕ್, ಆಚಾರ್ಯ ವೀರೇಂದ್ರ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ತಮ್ಮ ವೇದ ಅಧ್ಯಯನವನ್ನು ಮುಂದುವರೆಸಿದ್ದು, ಆರ್ಯ ಸಮಾಜದ ಪರಂಪರೆಯೊಂದಿಗೆ ತಮ್ಮ ಬಂಧವು ವಿವಾಹದಲ್ಲಿ ಮಂತ್ರಗಳನ್ನು ಪಠಿಸಲು ಪ್ರೇರೇಪಿಸಿದವು ಎಂದು ಅವರು ಹೇಳಿದ್ದಾರೆ.
Groom Becomes Priest: #Saharanpur Man Conducts His Own Wedding Rituals pic.twitter.com/keHAABXD77
— Genzdigest (@Genzofficia_l) January 25, 2025