ಮುಂಬೈ: ಬಾಲಿವುಡ್ ನಟ ಸೈಫ್ ಅಲಿಕಾನ್ ಅವರಿಗೆ ಚಾಕು ಇರಿದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಶರೀಫುಲ್ ಇಸ್ಲಾಂ ಶೆಹಜಾದ್ ಬೆರಳಚ್ಚು ಮತ್ತು ಸ್ಥಳದಲ್ಲಿ ಸಂಗ್ರಹಿಸಿದ ಬೆರಳಚ್ಚು ಮಾದರಿಗಳಿಗೆ ಹೋಲಿಕೆಯಾಗುತ್ತಿಲ್ಲ ಎಂದು ಸಿಐಡಿ ತಂಡ ಸಲ್ಲಿಸಿದ ಪರೀಕ್ಷಾ ವರದಿ ತಿಳಿಸಿದ್ದು, ಈ ವರದಿಯಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.
ದಾಳಿ ನಡೆದ ಸ್ಥಳದಲ್ಲಿ ಸಂಗ್ರಹಿಸಿದ ಬೆರಳಚ್ಚುಗಳಿಗೂ ಬಂಧಿತ ಆರೋಪಿ ಬೆರಳಚ್ಚಿಗೂ ಹೋಲಿಕೆ ಆಗುತ್ತಿಲ್ಲ ಎನ್ನುವ ಸ್ಪೋಟಕ ಸಂಗತಿ ಹೊರಬಿದ್ದಿದೆ. ಸಿಸಿಟಿವಿಯಲ್ಲಿ ಕಂಡು ಬಂದ ವ್ಯಕ್ತಿಗೂ ಬಂಧಿಸಲಾದ ಆರೋಪಿಗೂ ಹೋಲಿಕೆಯಾಗುತ್ತಿಲ್ಲ ಎನ್ನುವ ಸಂಶಯದ ಬೆನ್ನಿಗೆ ಮಹಾರಾಷ್ಟ್ರ ಸಿಐಡಿಗೆ ಸೇರಿದ ಫಿಂಗರ್ ಪ್ರಿಂಟ್ ಪ್ರಯೋಗಾಲಯದಲ್ಲಿ ನಡೆದ ಬೆರಳಚ್ಚು ಪರೀಕ್ಷೆಯಲ್ಲಿ ಆರೋಪಿಯ ಬೆರಳಚ್ಚಿಗೂ ಅಪರಾಧ ಸ್ಥಳದಲ್ಲಿ ನಡೆದ ಸಂಗ್ರಹಿಸಿದ ಮಾದರಿಗಳಿಗೂ ಹೋಲಿಕೆಯಾಗುತ್ತಿಲ್ಲ ಎಂದು ವರದಿ ನೀಡಲಾಗಿದೆ.
ಸೈಫ್ ಅಲಿಖಾನ್ ಮನೆಯಲ್ಲಿ ಸಂಗ್ರಹಿಸಲಾದ 19 ಬೆರಳಚ್ಚು ಮಾದರಿಗಳಲ್ಲಿ ಒಂದು ಕೂಡ ಬಂಧಿತ ಆರೋಪಿ ಶೆಹಜಾದ್ ಬೆರಳಚ್ಚಿಗೆ ಹೋಲಿಕೆ ಆಗುತ್ತಿಲ್ಲ ಎನ್ನಲಾಗಿದೆ.