ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಎತ್ತಿ ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪುಣೆ ಪಲ್ಸ್ ಎಂಬ ಎಕ್ಸ್ ಹ್ಯಾಂಡಲ್ ಪುಣೆಯ ಐಟಿ ಕಂಪನಿಯ ಹೊರಗೆ ವಾಕ್-ಇನ್ ಸಂದರ್ಶನಕ್ಕಾಗಿ ಉದ್ಯೋಗಾಕಾಂಕ್ಷಿಗಳ ಉದ್ದನೆಯ ಸಾಲು ನಿಂತಿರುವ ವೀಡಿಯೊವನ್ನು ಹಂಚಿಕೊಂಡಿದೆ.ಮಗರ್ಪಟ್ಟಾದ ಯುಪಿಎಸ್ನಲ್ಲಿ ವಾಕ್-ಇನ್ ಸಂದರ್ಶನಕ್ಕಾಗಿ 3,000 ಎಂಜಿನಿಯರ್ಗಳು ಜಮಾಯಿಸಿದ್ದರು ಎಂದು ಪೋಸ್ಟ್ ಹೇಳಿಕೊಂಡಿದೆ. ವರದಿಗಳ ಪ್ರಕಾರ, ಕಂಪನಿಯು 100 ಹುದ್ದೆಗಳಿಗೆ ವಾಕ್-ಇನ್ ಸಂದರ್ಶನವನ್ನು ಘೋಷಿಸಿತ್ತು.
ಈ ವೀಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ಅನೇಕ ಬಳಕೆದಾರರು ತಮ್ಮ ಪ್ರತಿಕ್ರಿಯೆಗಳೊಂದಿಗೆ ಅದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅಪ್ಲೋಡ್ ಆದ 24 ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 2 ಸಾವಿರ ಲೈಕ್ಗಳನ್ನು ಗಳಿಸಿದೆ. ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಎತ್ತಿ ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.
Pune: Viral Video Shows Over 3,000 Engineers Queuing for Walk-In Interview, Highlighting Fierce IT Job Market Competition pic.twitter.com/9Tvng35aKO
— Pune Pulse (@pulse_pune) January 25, 2025