ಬೆಂಗಳೂರು: ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿಗೆ ಆಗಮಿಸಿದ ನಟ ಶಿವಣ್ಣ ಶಸ್ತ್ರಚಿಕಿತ್ಸೆಯ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಚಿಕಿತ್ಸೆಗೆ ಹೋಗಬೇಕಾದರೆ ನಾನು ಎಮೋಷನಲ್ ಆಗಿದ್ದೆ. ತುಂಬಾ ಜನ ನನಗೆ ಧೈರ್ಯ ಹೇಳಿದ್ದಾರೆ. ಕಿಂಗ್ ಈಸ್ ಬ್ಯಾಕ್ ಎಂದು ಮಾತು ಆರಂಭಿಸಿದ ಶಿವಣ್ಣ ಏನೇ ಆದರೂ ಜೀವನದಲ್ಲಿ ಫೇಸ್ ಮಾಡಬೇಕು. ಎರಡು ಮೂರು ದಿನಗಳ ಕಾಲ ನಾನು ಲಿಕ್ವಿಡ್ ಫುಡ್ ನಲ್ಲಿ ಇದ್ದೆ. ನಿಮ್ಮ ಧೈರ್ಯ ಮೆಚ್ಚಲೇಬೇಕು ಎಂದು ವೈದ್ಯರು ಹೇಳಿದ್ದರು. ಈಗ ತುಂಬಾ ಸ್ಟ್ರಾಂಗ್ ಆಗಿದ್ದೇನೆ. ಮುಂದಿನ ಪ್ರಾಜೆಕ್ಟ್ ಕುರಿತು ತಯಾರಿ ಮಾಡುತ್ತೇನೆ. 131ನೇ ಸಿನಿಮಾ ಬಗ್ಗೆ ಪ್ಲಾನ್ ಮಾಡುತ್ತೇನೆ. ರಾಮ್ ಚರಣ್ ಜೊತೆಗೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.