ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.
ಫೆಬ್ರವರಿ 15ರ ಬದಲಿಗೆ ಫೆಬ್ರವರಿ 17ರಂದು ಸಂಪುಟ ಸಭೆ ನಡೆಸಲಾಗುವುದು. ಫೆಬ್ರವರಿ 18ರಂದು ಚಾಮರಾಜನಗರದಲ್ಲಿ ಸಮಾವೇಶ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರರಾಗಿರುವ ಕೆ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಮೈಸೂರು ರಾಜವಂಶಸ್ಥರ ಮೇಲೆ ಸರ್ಕಾರದ ಟಾರ್ಗೆಟ್ ಆರೋಪ ಕುರಿತ ಬಗ್ಗೆ ಮಾತನಾಡಿ, ಮೊದಲಿನಿಂದಲೂ ಕೇಸ್ ನಡೆಸಿಕೊಂಡು ಬಂದಿದೆ. ಇದು ಹೊಸದೇನಲ್ಲ. ಆ ಪ್ರಕರಣವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.